ಹಾಲುವಾಗಿಲು ಜಲಪಾತ ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನಲ್ಲಿ ಇರುವ ಒಂದು ಜಲಾಶಯವಾಗಿದೆ. ಇದು ಒಂದು ಚಿಕ್ಕ ಚೆಕ್ ಡ್ಯಾಂ ಆಗಿದ್ದು, ಈ ಸ್ಥಳವು ಹಾಸನ-ಮಂಗಳೂರು ಹೆದ್ದಾರಿಯ ಸಮೀಪದಲ್ಲಿದೆ. ಅನ್ವೇಷಿಸಲು ಅದ್ಭುತವಾದ ಸ್ಥಳ ಮತ್ತು ಸುಂದರವಾದ ನೀರಿನ ಹರಿವು, ಮನಸ್ಸಿಗೆ ಒಂದು ಸಂತೋಷದ ಅನುಭವ ನೀಡುವ ಜಲಪಾತವಾಗಿದೆ.
ಹಾಲುವಾಗಿಲು ಜಲಪಾತದ ದೂರಗಳು
- ಬೆಂಗಳೂರು – 190 ಕಿ.ಮೀ
- ಹಾಸನ – 8 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 10 ಕಿ.ಮೀ
ಹಾಸನದ ಹಾಲುವಾಗಿಲು ಜಲಪಾತ ಭಾರೀ ಗಮನ ಸೆಳೆಯುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳ ನಡುವೆ ಇದು ಕೊಂಚ ವಿಬಿನ್ನವಾದರೂ, ನೋಡಲು ಮಾತ್ರ ಅತ್ಯಂತ ಆಕರ್ಷಣೀಯವಾಗಿದೆ. ತನ್ನ ಸೌಂದರ್ಯದಿಂದಲೇ ಮೋಡಿ ಮಾಡುವ ಈ ಹಾಲುವಾಗಿಲು ಫಾಲ್ಸ್ (Haluvagilu Falls) ಹಾಲು ನೊರೆಯಂತೆ ಧುಮ್ಮಿಕ್ಕುವುದು ವಿಶೇಷ.
ಭೇಟಿ ನೀಡಿ





