ಶ್ರವಣಬೆಳಗೊಳ

ವಣಬೆಳಗೊಳವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ಇರುವ ಐತಿಹಾಸಿಕ, ಧಾರ್ಮಿಕ ಮತ್ತು ಪ್ರವಾಸಿ ತಾಣವಾಗಿದೆ. ಇಲ್ಲಿ ವಿಶ್ವವಿಖ್ಯಾತ 58 ಅಡಿ ಎತ್ತರದ ಏಕಶಿಲ ಬಾಹುಬಲಿಯ ಪ್ರತಿಮೆ ಇದೆ. ಈ ಏಕಶಿಲ ಬಾಹುಬಲಿಯ ಮೂರ್ತಿಯನ್ನು ನಾಲ್ಕನೇ ರಾಜಮಲ್ಲನ ಮಂತ್ರಿಯಾಗಿದ್ದ ಚಾವುಂಡರಾಯರು ನಿರ್ಮಿಸಿದರು. ಇದು ಜೈನ ಧಾರ್ಮಿಕ ಕೇಂದ್ರವಾಗಿದೆ. ಚಾವುಂಡರಯರು “ಚಾವುಂಡರಾಯ ಪುರಾಣ”ವನ್ನು ರಚಿಸಿದರು.

ಈ ಸ್ಥಳವು ಬೆಂಗಳೂರಿನಿಂದ 167 ಕಿ.ಮೀ, ಹಾಸನದಿಂದ 53 ಕಿ.ಮೀ ಹಾಗೂ ಚನ್ನರಾಯಪಟ್ಟಣದಿಂದ 12 ಕಿ.ಮೀ ದೂರದಲ್ಲಿದೆ.

ಏಷ್ಯಾ ಖಂಡದಲ್ಲಿಯೇ ಅತಿ ಎತ್ತರದ ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿ ದೊಡ್ಡದಾದ ಗೊಮ್ಮಟೇಶ್ವರನ ಶಿಲೆಯಿರುವ ಶ್ರವಣಬೆಳಗೋಳವು ಪ್ರಸಿದ್ಧ ಜೈನ ಪುಣ್ಯಕ್ಷೇತ್ರವಾಗಿದೆ. ವಿಂಧ್ಯಗಿರಿಯ ಮೇಲೆ ಕೆತ್ತಲ್ಪಟ್ಟಿರುವ ಈ ಬೃಹದಾಕಾರದ ಮೂರ್ತಿಯನ್ನು ಚಾವುಂಡರಾಯನು ಕ್ರಿ.ಶ. 981ರಲ್ಲಿ ನಿರ್ಮಿಸಿದನು. ಪ್ರತಿ 12 ವರ್ಷಕ್ಕೊಮ್ಮೆ ಇಲ್ಲಿ ಮಹಾಮಸ್ತಕಾಭಿಷೇಕ ನಡೆಯುತ್ತದೆ.

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section