ತಿಮ್ಮನಾಯಕನಹಳ್ಳಿ ಕೋಟೆಯು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಇರುವ ಒಂದು ಐತಿಹಾಸಿಕ ಹಾಗೂ ಪುರಾತನ ಕೋಟೆಯಾಗಿದೆ. ಈ ಕೋಟೆಗೆ ಸರಿಯಾದ ಜೀರ್ಣೋದ್ಧಾರವಾಗದ ಕಾರಣ ಅದು ಈಗ ಪಾಳುಬಿದ್ದ ಸ್ಥಿತಿಯಲ್ಲಿದೆ. ಆದರೆ ಇದರ ಸುತ್ತಲಿನ ನೈಸರ್ಗಿಕ ಸೌಂದರ್ಯ ಮನಮೋಹಕವಾಗಿದೆ.
ತಿಮ್ಮನಾಯಕನಹಳ್ಳಿ ಕೋಟೆಯ ದೂರಗಳು
- ಬೆಂಗಳೂರು – 65 ಕಿ.ಮೀ
- ಕೋಲಾರ – 27 ಕಿ.ಮೀ
- ಮಾಲೂರು – 20 ಕಿ.ಮೀ
- ಮಾಲೂರು ರೈಲ್ವೆ ನಿಲ್ದಾಣ – 19 ಕಿ.ಮೀ
- ದೇವನಗೊಂದಿ ರೈಲ್ವೆ ನಿಲ್ದಾಣ – 13 ಕಿ.ಮೀ
- ಬೆಂಗಳೂರು ವಿಮಾನ ನಿಲ್ದಾಣ – 75 ಕಿ.ಮೀ
ಈ ಕೋಟೆಯ ಪಕ್ಕದಲ್ಲಿರುವ ಕೆರೆಯ ಬಳಿ ದೊರಕಿದ ಒಂದು ಶಾಸನದ ಪ್ರಕಾರ, ಹಿಂದೆ ತಿಮ್ಮನಾಯಕನಹಳ್ಳಿಯನ್ನು “ತಿಮ್ಮ ಸಮುದ್ರ” ಎಂದು ಕರೆಯುತ್ತಿದ್ದರು. ಈ ಕೋಟೆಯು ಮಧ್ಯಮ ಗಾತ್ರದ ಕಲ್ಲುಗಳಿಂದ ನಿರ್ಮಿಸಲ್ಪಟ್ಟಿದೆ. ಕೋಟೆಯು ಚೌಕಾಕಾರವಾಗಿದ್ದು, ಅದರ ನಾಲ್ಕು ಮೂಲಗಳಲ್ಲಿ ಬುರುಜುಗಳನ್ನು ನಿರ್ಮಿಸಲಾಗಿದೆ.
ಭೇಟಿ ನೀಡಿ





