ಶ್ರೀ ಹರಳಯ್ಯ ಶರಣರ ಗವಿ

ಶ್ರೀ ಹರಳಯ್ಯ ಶರಣರ ಗವಿಯು ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿದೆ. ಈ ಪವಿತ್ರ ಸ್ಥಳವು ಶರಣ ಸಂಪ್ರದಾಯದ ಮಹಾನ್ ಶರಣರಾದ ಶ್ರೀ ಹರಳಯ್ಯ ಶರಣರಿಗೆ ಸಮರ್ಪಿತವಾಗಿದೆ.

ಈ ಸ್ಥಳವು ಬೆಂಗಳೂರಿನಿಂದ 715 ಕಿ.ಮೀ (NH50 ಮೂಲಕ), 730 ಕಿ.ಮೀ (NH 44 ಹೈದರಾಬಾದ್ ಮೂಲಕ) ಮತ್ತು ಬೀದರ್ ನಿಂದ 80 ಕಿ.ಮೀ ದೂರದಲ್ಲಿದೆ. ಹಾಗೂ ಬಸವಕಲ್ಯಾಣದಿಂದ 2 ಕಿ.ಮೀ ದೂರದಲ್ಲಿದೆ.

ಹರಳಯ್ಯನವರ ಬಗ್ಗೆ ಇತಿಹಾಸ

ಹರಳಯ್ಯನವರು 12ನೆಯ ಶತಮಾನದ ಶಿವಶರಣ. ಇವರು ಬಸವಣ್ಣನವರ ಸಮಕಾಲೀನ ಕಾಲದಲ್ಲಿ ಇರುವ ಶಿವಶರಣರು. ಪಾದರಕ್ಷೆಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ನಿರತನಾಗಿದ್ದ ಈತ ಗುರು ಲಿಂಗ ಜಂಗಮ ಸೇವೆಗೆ ತನ್ನ ತನುಮನಧನ ಗಳನ್ನು ಮುಡಿಪಾಗಿಟ್ಟಿದ್ದವರು. ಒಮ್ಮೆ ಬಸವಣ್ಣನವರನ್ನು ಮಾರ್ಗಮಧ್ಯ ದಲ್ಲಿ ಭೇಟಿಯಾದ ಹರಳಯ್ಯ, ಶರಣು ಬಸವರಸ ಎಂದು ತಲೆಬಾಗಿ ವಂದಿಸಿದರು. ಅದಕ್ಕೆ ಪ್ರತಿಯಾಗಿ ಬಸವಣ್ಣ ಶರಣು, ಶರಣಾರ್ಥಿ ಹರಳಯ್ಯ ತಂದೆ ಎಂದು ವಂದಿಸಿದರು. ತನ್ನ ಒಂದು ಶರಣಾರ್ಥಿಗೆ ಬಸವಣ್ಣ ಎರಡು ಶರಣಾರ್ಥಿ ಹೇಳಿದರು. ಹರಳಯ್ಯನಿಗೆ ಬಸವಣ್ಣನ ಒಂದು ಶರಣಾರ್ಥಿ ತನ್ನ ಮೇಲೆ ಹೊರೆಯಾಗಿ ಕುಳಿತಂತೆ ಭಾಸವಾಯಿತು. ಆ ಕುರಿತು ಪತ್ನಿಯೊಡನೆ ಸಮಾಲೋಚಿಸಿದರು. ಏನೂ ತೋಚದೆ ಕೊನೆಗೆ ತಮ್ಮಿಬ್ಬರ ತೊಡೆಯ ಚರ್ಮದಿಂದ ಪಾದರಕ್ಷೆಗಳನ್ನು ಮಾಡಿ ಬಸವಣ್ಣನವರ ಪಾದಗಳಿಗೆ ತೊಡಿಸಿ ತಮ್ಮ ಹೊರೆ ಹಗುರ ಮಾಡಿಕೊಳ್ಳಲು ನಿರ್ಧರಿಸಿದರು. ಅದರಂತೆ ಸುಂದರವಾದ ಒಂದು ಜೊತೆ ಪಾದರಕ್ಷೆಗಳನ್ನು ತಯಾರಿಸಿಕೊಂಡು ಹೋಗಿ ಬಸವಣ್ಣನವರಿಗೆ ಕೊಟ್ಟರು. ಬಸವಣ್ಣ ಅವುಗಳ ಶ್ರೇಷ್ಠತೆಯನ್ನು ಹೊಗಳಿ, ಅವನ್ನು ಹರಳಯ್ಯ ದಂಪತಿಗಳಿಗೆ ಹಿಂತಿರುಗಿಸಿದ ಎಂಬುದಾಗಿ ಬಸವ ಪುರಾಣ, ಭೈರವೇಶ್ವರಕಾವ್ಯ, ಕಥಾಮಣಿಸೂತ್ರರತ್ನಾಕರ, ಶರಣ ಲೀಲಾಮೃತ ಗ್ರಂಥಗಳಿಂದ ಗೊತ್ತಾಗುತ್ತದೆ.

ಭೇಟಿ ನೀಡಿ
ಬಸವಕಲ್ಯಾಣ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಬೀದರ್ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section