ಕೋಸಂಬರಿ ದಕ್ಷಿಣ ಭಾರತದ ಸಾಂಪ್ರದಾಯಿಕ ಸಲಾಡ್ ಆಗಿದೆ. ಕೋಸಂಬರಿ ಒಂದು ಸಾಂಪ್ರದಾಯಿಕ ಪದಾರ್ಥವಾಗಿದ್ದು, ಇದನ್ನು ಕಡಲೆ ಬೇಳೆ ಅಥವಾ ಹೆಸರುಬೇಳೆಯನ್ನು ಉಪಯೋಗಿಸಿ ತಯಾರಿಸುತ್ತಾರೆ. ಬೇಳೆಗಳನ್ನು ಉಪಯೋಗಿಸಿ ತಯಾರಿಸುವ ಕೋಸಂಬರಿಯೂ ಆರೋಗ್ಯದಾಯಕವಾಗಿದೆ. ವಿಶೇಷವಾಗಿ ಹಬ್ಬದ ಊಟ, ದೇವಾಲಯದ ಪ್ರಸಾದ ಅಥವಾ ವಿಶೇಷ ಸಂದರ್ಭಗಳ ಭಾಗವಾಗಿ ಇದನ್ನು ತಯಾರಿಸಲಾಗುತ್ತದೆ.
ತುರಿದ ಕ್ಯಾರೆಟ್, ನೀರಿನಲ್ಲಿ ನೆನೆಸಿದ ಹೆಸರುಬೇಳೆ, ತೆಂಗಿನ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಸೇರಿಸಿ ತಯಾರಿಸಿ, ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಹಸಿ ಮೆಣಸಿನಕಾಯಿ ಹಾಕಿ ಒಗ್ಗರಣೆ ನೀಡಿ ತಯಾರಿಸುವ ಒಂದು ಸಲಾಡ್ ಇದು. ಶುಭ ಸಮಾರಂಭಗಳಲ್ಲಿ ಕೋಸಂಬರಿ ಇರದಿದ್ದರೆ ಊಟವೇ ಅಪೂರ್ಣವಾಗುತ್ತದೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರ ಬಾಯಲ್ಲೂ ಕೋಸಂಬರಿಯ ರುಚಿ ಒಂದು ಕ್ಷಣ ನೀರೂರಿಸುತ್ತದೆ.
Read Also