ಮಸಾಲೆ ದೋಸೆ ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ತೆಳುವಾದ ಮತ್ತು ಗರಿಗರಿಯಾದ ದೋಸೆ ಮೇಲೆ ಎಣ್ಣೆ ಹಾಗೂ ಕೆಂಪು ಚಟ್ಣಿಯನ್ನು ಸವರಿ ಅದರ ಮದ್ಯಕ್ಕೆ ಆಲೂಗಡ್ಡೆ ಪಲ್ಯ ಸೇರಿಸಿ ತುಂಬ ಸ್ಟೈಲಿಶ್ ಆಗಿ ಸರ್ವ್ ಮಾಡುವ ಈ ಪದಾರ್ಥವು ನೋಡುವುದಕ್ಕೂ ತಿನ್ನುವುದಕ್ಕೂ ಹೆಚ್ಚು ಅದ್ಬುತವಾಗಿರುತ್ತದೆ.
ಆಲೂಗೆಡ್ಡೆ,ಈರುಳ್ಳಿ, ಹಸಿರು ಬಟಾಣಿ, ಹಸಿರು ಮೆಣಸಿನಕಾಯಿಗಳು, ಸಾಸಿವೆ, ಉದ್ದಿನ ಬೇಳೆ, ಎಣ್ಣೆ, ಅರಿಶಿನ, ಕರಿ ಎಲೆಗಳು, ಕೊತ್ತಂಬರಿ ಸೊಪ್ಪು,ರುಚಿಗೆ ತಕ್ಕಂತೆ ಉಪ್ಪು ಸೇರಿಸಿ ತಯಾರಿಸುವ ಈ ಆಲೂಗಡ್ಡೆ ಪಲ್ಯವು ಮಸಾಲದೋಸೆಗೆ ಒಂದೊಳ್ಳೆ ರುಚಿಯನ್ನು ನೀಡುತ್ತದೆ. ಖಾರ ಇಷ್ಟ ಪಡುವವರಿಗೆ ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ನಿಂಬೆರಸ, ತೆಂಗಿನ ತುರಿ, ಎಣ್ಣೆ, ಉಪ್ಪು ಸೇರಿಸಿ ತಯಾರಿಸುವ ಕೆಂಪು ಚಟ್ನಿ ಒಂದೊಳ್ಳೆ ರುಚಿಯನ್ನು ಕೊಡುತ್ತೆ. ಎಲ್ಲಾ ರೀತಿಯ ರುಚಿಗಳನ್ನು ನೀಡುವ ಈ ಮಸಾಲೆಯುಕ್ತ ದೋಸೆ ಎಲ್ಲರಿಗೂ ಪ್ರಿಯವಾದದ್ದು.