ದೋಸೆ ಇದು ಕರ್ನಾಟಕ ಪ್ರಸಿದ್ದ ಬೆಳಗಿನ ತಿಂಡಿಯಾಗಿದೆ. ಅಕ್ಕಿ ಹಿಟ್ಟು ಬಳಸಿ ತಯಾರಿಸುವ ಈ ದೋಸೆಯು ರುಚಿಯಾದ ಬೆಳಗಿನ ತಿಂಡಿಯಾಗಿದೆ. ಅಕ್ಕಿಯನ್ನು ರುಬ್ಬಿ ಹಿಟ್ಟಿನ ನೀರು ಮಾಡಿಕೊಂಡು ಅದನ್ನು ಎಣ್ಣೆ ಹಚ್ಚಿದ ತವದ ಮೇಲೆ ವೃತ್ತಕಾರವಾಗಿ ತಳಿದು ಚನ್ನಾಗಿ ಬೇಯಿಸಿ ತಯಾರಿಸಲಾಗುತ್ತದೆ.
ಚಟ್ನಿಯು ಇದರ ಬೆಸ್ಟ್ ಕಂಬಿನೇಸನ್ ಆಗಿದೆ. ಎಲ್ಲರೂ ಇಷ್ಟ ಪಟ್ಟು ತಿನ್ನುವ ದೋಸೆಯು ಆರೋಗ್ಯಕರವು ಆಗಿದೆ. ನೀರ್ ದೋಸೆ, ಬೆಣ್ಣೆ ದೋಸೆ, ಮಸಾಲ ದೋಸೆ ಎಂಬ ಹಲವು ವಿಧಗಳಲ್ಲಿ ದೋಸೆಯು ಎಲ್ಲರ ಮನಗೆದ್ದಿದೆ. ವಾರದಲ್ಲಿ ಒಮ್ಮೆಯಾದರೂ ಮನೆಯಲ್ಲಿ ದೋಸೆ ಮಾಡುವುದು ಅಬ್ಯಾಸವಾಗಿ ಬಿಟ್ಟಿದೆ.