ಅಕ್ಕಿ ಕಡುಬು

ಕಡಬು ಇದು ಮಲೆನಾಡಿನ (ಶಿವಮೊಗ್ಗ) ಪ್ರಸಿದ್ದ ಬೆಳಗಿನ ತಿಂಡಿಯಾಗಿದೆ. ಇಂದಿಗೂ ಕೂಡ ಮಲೆನಾಡಿನ ಕೆಲವು ಮನೆಗಳಲ್ಲಿ ವಾರದ 7 ದಿನವು ಕೂಡ ಕಡಬನ್ನೇ ಮಾಡುವುದು ರೂಡಿ ಇದೆ. ಅಕ್ಕಿ ಹಿಟ್ಟು, ನೀರು ಮತ್ತು ಉಪ್ಪು ಮೂರೇ ಪದಾರ್ಥ ಬಳಸಿ ಮಾಡುವ ಈ ಬೆಳಗಿನ ತಿಂಡಿಯನ್ನು ತಿನ್ನುವುದು ಅತ್ಯಂತ ಆರೋಗ್ಯಕರ.

ಹಳ್ಳಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಕಡಬು ತಿಂದರೆ ಸಾಕು ಹೆಚ್ಚು ಶಕ್ತಿ ಬಂದಂತೆ. ಅಕ್ಕಿ ಹಿಟ್ಟು, ನೀರು ಮತ್ತು ಉಪ್ಪನ್ನು ಚೆನ್ನಾಗಿ ಬೇಯಿಸಿ ದೊಡ್ಡ ದೊಡ್ಡ ಉಂಡೆ ಕಟ್ಟಿ ಬಿಸಿ ಹವೆಯಲ್ಲಿ (ಸರಗೋಲು) ಬೆಯುಸಿ ತಯಾರಿಸುತ್ತಾರೆ. ಅಷ್ಟೇನೂ ರುಚಿ ಇಲ್ಲದಂತಹ ಈ ಕಡಬು ಈಗಿನ ಮಕ್ಕಳಿಗೆ ಅಷ್ಟೇನೂ ಇಷ್ಟ ಆಗದಿದ್ದರೂ ಸಹ ಇದು ಅತ್ಯಂತ ಆರೋಗ್ಯಕರವಾದ ಬೆಳಗಿನ ತಿನಿಸಾಗಿದೆ. ಕೋಳಿ ಸಾರು ಇದರ ಬೆಸ್ಟ್ ಕಂಬಿನೇಸನ್ ಆಗಿದೆ.