ಬಾಚನಕಿ ಜಲಾಶಯ ಮತ್ತು ಅಣೆಕಟ್ಟು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಮಜ್ಜಿಗೇರಿ ಪ್ರದೇಶದಲ್ಲಿರುವ ಮನೋಹರ ಪ್ರಕೃತಿ ತಾಣವಾಗಿದೆ. ಹಚ್ಚಹಸಿರಿನ ಪರಿಸರ ಮತ್ತು ಜಲಾಶಯದ ಆಕರ್ಷಕ ನೋಟವು ಈ ಸ್ಥಳವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿದೆ.
ಬಾಚನಕಿ ಜಲಾಶಯದ ದೂರಗಳು
- ಬೆಂಗಳೂರು – 400 ಕಿ.ಮೀ
- ಕಾರವಾರ – 141 ಕಿ.ಮೀ
- ಮುಂಡಗೋಡು – 5 ಕಿ.ಮೀ
- ಹುಬ್ಬಳಿ ರೈಲ್ವೆ ನಿಲ್ದಾಣ – 43 ಕಿ.ಮೀ
ತಾಲ್ಲೂಕಿನ ಅತಿದೊಡ್ಡ ಜಲಾಶಯವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಚನಕಿ ಜಲಾಶಯವು ಸಾವಿರಾರು ಹೆಕ್ಟೇರ್ ಕೃಷಿಭೂಮಿಗಳಿಗೆ ಜೀವನಾಡಿಯಾಗಿದೆ. 1974ರಲ್ಲಿ ಸುಮಾರು 127 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಜಲಾಶಯವು ಹುನಗುಂದ ಹಾಗೂ ಇಂದೂರ ಗ್ರಾಮಗಳ ವ್ಯಾಪ್ತಿಯ ಕೃಷಿಭೂಮಿಗಳಿಗೆ ನೀರಾವರಿ ಒದಗಿಸುತ್ತಿದೆ. ಇದರ ನೀರಿನಿಂದ ರೈತರು ಬೇಸಿಗೆ ಬೆಳೆಗಳನ್ನು ಯಶಸ್ವಿಯಾಗಿ ಬೆಳೆಯಲು ಸಾಧ್ಯವಾಗಿದ್ದು, ಸ್ಥಳೀಯ ಕೃಷಿ ಅಭಿವೃದ್ಧಿಯಲ್ಲಿ ಜಲಾಶಯವು ಮಹತ್ವದ ಪಾತ್ರವನ್ನು ವಹಿಸುತ್ತಿದೆ.



