ಧರ್ಮ ಜಲಾಶಯ

ಧರ್ಮ ಜಲಾಶಯ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲ್ಲೂಕಿನ ಮಳಗಿ ಪ್ರದೇಶದಲ್ಲಿರುವ ಮನೋಹರ ಜಲಾಶಯವಾಗಿದೆ. ಹಚ್ಚಹಸಿರಿನ ಪರಿಸರ ಮತ್ತು ಜಲಾಶಯದ ಆಕರ್ಷಕ ನೋಟವು ಈ ಸ್ಥಳವನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಿದೆ.

ಧರ್ಮ ಜಲಾಶಯದ ದೂರಗಳು

  • ಬೆಂಗಳೂರು – 385
  • ಕಾರವಾರ – 151
  • ಮುಂಡಗೋಡು – 34
  • ಶಿರಸಿ – 33
  • ಹುಬ್ಬಳಿ ರೈಲ್ವೆ ನಿಲ್ದಾಣ – 55

ಧರ್ಮ ಜಲಾಶಯ ಯೋಜನೆಯು 1965ರ ಫೆಬ್ರುವರಿ 20ರಂದು ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಎಸ್. ನಿಜಲಿಂಗಪ್ಪ ಅವರ ಅಮೃತಹಸ್ತದಿಂದ ಆರಂಭಗೊಂಡಿತು.