ಚುರುಮುರಿ ಅಥವಾ ಮಸಾಲ ಮಂಡಕ್ಕಿ ಎಂದು ಕರೆಯಲ್ಪಡುವ ಈ ಬೀದಿ ಬದಿಯ ಪ್ರಸಿದ್ದ ತಿನಿಸು ಚಿಕ್ಕ ಮಕ್ಕಳಿಂದ ಹಿರಿಯರ ವರೆಗೂ ಎಲ್ಲರೂ ಇಷ್ಟ ಪಟ್ಟು ಬಾಯಿ ಚಪ್ಪರಿಸಿ ತಿನ್ನುವ ತಿನಿಸಾಗಿದೆ. ಎಲ್ಲಾ ಪ್ರವಾಸಿ ತಾಣಗಳಲ್ಲಿ ಇದು ಅತ್ಯಂತ ಪ್ರಸಿದ್ದ ತಿನಿಸಾಗಿದೆ.
ಇದನ್ನು ಮಂಡಕ್ಕಿ, ಈರುಳ್ಳಿ ಕ್ಯಾರೆಟ್ ತುರಿ, ಮಾವಿನಕಾಯಿ ತುರಿ, ಮೆಣಸಿನ ಪುಡಿ, ಎಣ್ಣೆ ಸೇರಿಸಿ ತಯಾರಿಸಲಾಗುತ್ತದೆ. ಹಾಗೂ ಇದನ್ನು ಕೇವಲ 5 ನಿಮಿಷಗಳಲ್ಲಿ ತಯಾರಿಸಬಹುದಾಗಿದೆ ಅಲ್ಲದೆ ಇದನ್ನು ಬೆಂಕಿ ಉಪಯೋಗಿಸದೆ ತಯಾರಿಸಲಾಗುತ್ತದೆ. ಗರಿ ಗರಿ ಯಾಗಿರುವ ಈ ಚುರುಮುರಿಯು ಅತ್ಯಂತ ರುಚಿಕರವಾದ ಕರ್ನಾಟಕದ ಪ್ರಸಿದ್ದ ಸ್ನ್ಯಾಕ್ಸ್ ಆಗಿದೆ.