ಗುಡ್ಡೆಹಳ್ಳಿ ಗುಡ್ಡವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಗುಡ್ಡೆಹಳ್ಳಿ ಸಮೀಪದಲ್ಲಿರುವ ಒಂದು ಸುಂದರ ಬೆಟ್ಟವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 1,800 ಅಡಿ ಎತ್ತರದಲ್ಲಿದೆ. ಬೆಟ್ಟದ ಮೇಲಿರುವ ಈ ಪ್ರದೇಶವು ಚಾರಣಿಗರಿಗೆ ಅತ್ಯುತ್ತಮ ತಾಣವಾಗಿದೆ. ಕಾಡಿನ ಮಧ್ಯೆ ಸಾಗುವ ಚಾರಣ ಮಾರ್ಗಗಳು ಹಾಗೂ ಅಲ್ಲಿಂದ ಕಾಣುವ ಅರಬ್ಬೀ ಸಮುದ್ರದ ವಿಹಂಗಮ ನೋಟವು ಪ್ರವಾಸಿಗರಿಗೆ ಅದ್ಭುತ ಅನುಭವವನ್ನು ನೀಡುತ್ತದೆ.
ಗುಡ್ಡೆಹಳ್ಳಿ ಗುಡ್ಡದ ದೂರಗಳು
- ಬೆಂಗಳೂರು – 521 ಕಿ.ಮೀ
- ಕಾರವಾರ – 5 ಕಿ.ಮೀ
- ಕಾರವಾರ ರೈಲ್ವೆ ನಿಲ್ದಾಣ – 11 ಕಿ.ಮೀ



