ಗೋಕರ್ಣ ಮುಖ್ಯ ಕಡಲತೀರವು ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಗೋಕರ್ಣದಲ್ಲಿರುವ ಪ್ರಸಿದ್ಧ ಕಡಲತೀರವಾಗಿದೆ. ಗೋಕರ್ಣದ ಪ್ರಸಿದ್ಧ ಶ್ರೀ ಮಹಾಬಲೇಶ್ವರ ದೇವಾಲಯದ ಸಮೀಪದಲ್ಲಿರುವ ಈ ಕಡಲತೀರವು ಸುಂದರವಾದ ಸೂರ್ಯಾಸ್ತದ ದೃಶ್ಯಗಳು, ವಿಶಾಲವಾದ ಮರಳಿನ ತೀರ ಹಾಗೂ ಧಾರ್ಮಿಕ ಮತ್ತು ಸಾಂಸ್ಕೃತಿಕ ವಾತಾವರಣಕ್ಕೆ ಹೆಸರುವಾಸಿಯಾಗಿದೆ.
ಗೋಕರ್ಣ ಮುಖ್ಯ ಕಡಲತೀರದ ದೂರಗಳು
- ಬೆಂಗಳೂರು – 489 ಕಿ.ಮೀ
- ಕಾರವಾರ – 48 ಕಿ.ಮೀ
- ಕುಮಟಾ – 31 ಕಿ.ಮೀ
- ಕುಮಟಾ ರೈಲ್ವೆ ನಿಲ್ದಾಣ – 32 ಕಿ.ಮೀ
- ಗೋಕರ್ಣ ರೈಲ್ವೆ ನಿಲ್ದಾಣ – 10 ಕಿ.ಮೀ





