ಪುರಾತನ ಹೊಯ್ಸಳ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯ ಮುದಿಗೆರೆ

ಪುರಾತನ ಹೊಯ್ಸಳ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಮುದಿಗೆರೆ ಗ್ರಾಮದಲ್ಲಿರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಪುರಾತನ ದೇವಾಲಯವಾಗಿದೆ. ಈ ದೇವಾಲಯವು ಪ್ರಸ್ತುತ ಸಂಪೂರ್ಣವಾಗಿ ಶಿಥಿಲಾವಸ್ಥೆಯಲ್ಲಿದ್ದು, ನಿರ್ವಹಣೆ ಮತ್ತು ಸಂರಕ್ಷಣೆಯ ಅಗತ್ಯವಿದೆ.

ಮುದಿಗೆರೆ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯದ ದೂರಗಳು

  • ಬೆಂಗಳೂರು – 208 ಕಿ.ಮೀ
  • ಚಿಕ್ಕಮಗಳೂರು – 63 ಕಿ.ಮೀ
  • ಕಡೂರು – 24 ಕಿ.ಮೀ
  • ಕಡೂರು ರೈಲ್ವೆ ನಿಲ್ದಾಣ – 24 ಕಿ.ಮೀ
  • ಶಿವಮೊಗ್ಗ ವಿಮಾನ ನಿಲ್ದಾಣ – 70 ಕಿ.ಮೀ

ಹೊಯ್ಸಳ ರಾಜವಂಶದ ವಾಸ್ತುಶಿಲ್ಪಿಗಳು ತಮ್ಮ ಸಾಮ್ರಾಜ್ಯದ ಮೂಲೆಮೂಲೆಗಳಲ್ಲೂ ಸುಂದರವಾದ ದೇವಾಲಯಗಳನ್ನು ನಿರ್ಮಿಸಿದ್ದರು. ಅವುಗಳಲ್ಲಿ ಹೊಯ್ಸಳರ ಕಾಲದ ಮತ್ತೊಂದು ಅಮೂಲ್ಯ ದೇವಾಲಯ ಇದಾಗಿದೆ.