ಎತ್ತಿನ ಭುಜ

ಎತ್ತಿನ ಭುಜವು ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೈರಾಪುರ ಗ್ರಾಮದ ಸಮೀಪದಲ್ಲಿರುವ ಪಶ್ಚಿಮ ಘಟ್ಟಗಳ ಸುಂದರ ಪರ್ವತ ಶಿಖರವಾಗಿದೆ. ಇದು ಸಮುದ್ರ ಮಟ್ಟದಿಂದ ಸುಮಾರು 4,265 ಅಡಿ ಎತ್ತರದಲ್ಲಿದೆ. ಎತ್ತಿನ ಭುಜವು ಜನಪ್ರಿಯ ಹಾಗೂ ಸುಲಭವಾದ ಚಾರಣ (ಟ್ರೆಕ್ಕಿಂಗ್) ತಾಣವಾಗಿದ್ದು, ಪ್ರಕೃತಿ ಪ್ರಿಯರು ಮತ್ತು ಚಾರಣಾಸಕ್ತರಿಗೆ ಉತ್ತಮ ಅನುಭವವನ್ನು ನೀಡುತ್ತದೆ.

ಎತ್ತಿನ ಭುಜದ ದೂರಗಳು

  • ಬೆಂಗಳೂರು – 256 ಕಿ.ಮೀ
  • ಚಿಕ್ಕಮಗಳೂರು – 56 ಕಿ.ಮೀ
  • ಮೂಡಿಗೆರೆ– 27 ಕಿ.ಮೀ
  • ಸಕಲೇಶಪುರ ರೈಲ್ವೆ ನಿಲ್ದಾಣ – 38 ಕಿ.ಮೀ