ಹಾಸನಾಂಬ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಸಲೈನ್ ರಸ್ತೆಯಲ್ಲಿದೆ. ಈ ದೇವಾಲಯವು ವರ್ಷಕ್ಕೊಮ್ಮೆ ತೆರೆಯುತ್ತದೆ. ಈ ದೇವಾಲಯವು ಹೊಯ್ಸಳ ವಾಸ್ತುಶಿಲ್ಪ ಮತ್ತು ಹಿಂದೂ ದೇವಾಲಯದ ವಾಸ್ತುಶಿಲ್ಪವನ್ನು ಹೊಂದಿದೆ. ಹಾಸನಾಂಬ ದೇವಾಲಯವು ಕರ್ನಾಟಕದ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ, ಇದು ಶ್ರೀಮಂತ ಇತಿಹಾಸ ಮತ್ತು ದೀಪಾವಳಿಯ ಸಮಯದಲ್ಲಿ ವರ್ಷಕ್ಕೊಮ್ಮೆ ಮಾತ್ರ ತೆರೆಯುವ ವಿಶಿಷ್ಟ ಸಂಪ್ರದಾಯಕ್ಕೆ ಹೆಸರುವಾಸಿಯಾಗಿದೆ. ಈ ದೇವಸ್ಥಾನವು ಹಾಸನಾಂಬ ದೇವಿಗೆ ಸಮರ್ಪಿತವಾಗಿದೆ, ಹಾಸನಾಂಬೆ ನಗರ ದೇವತೆಯಾಗಿರುವುದರಿಂದ ಹಾಸನ ಎಂದು ಹೆಸರಿಸಲಾಗಿದೆ.
ಹಾಸನಾಂಬ ದೇವಾಲಯವು ಬೆಂಗಳೂರಿನಿಂದ NH75 ಮೂಲಕ 184 ಕಿ.ಮೀ ಮತ್ತು ಕುಣಿಗಲ್ – ಮದ್ದೂರ್ ರೋಡ್ & NH75 ಮೂಲಕ 235 ದೂರದಲ್ಲಿದೆ. ಹಾಗೂ ಹಾಸನದಿಂದ ಕೇವಲ 1.2 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 3 ಕಿ.ಮೀ ದೂರದಲ್ಲಿದೆ.
ಇತಿಹಾಸ
ಕ್ರಿ.ಶ.114ರ ವೀರಗಲ್ಲಿ ಕುದೂರು ಗಾಂಧಿ ಶಾಸನದ ಪ್ರಕಾರ ಇದು 12ನೇ ಶತಮಾನ ಪಾಳೇಗಾರ ಕೃಷ್ಣಪ್ಪನಾಯಕನ ಕಾಲದ್ದು. ಕೃಷ್ಣಪ್ಪನಾಯಕರು ವ್ಯಾಪಾರಕ್ಕೆಂದು ಹೋದಾಗ ಮೊಲವೊಂದು ಕಣ್ಣಿಗೆ ಬಿತ್ತು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. ಪ್ರತ್ಯಕ್ಷಳಾದ ಆದಿಶಕ್ತಿ ಸ್ವರೂಪಿಣಿಯು ಈ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸುವಂತ್ತೆ, ನಾನು ಇಲ್ಲಿ ಹಾಸನಾಂಬೆಯಾಗಿ ನೆಲೆಸುತ್ತೇನೆ.
ಇನ್ನೊಂದು ಪುರಾಣದ ಪ್ರಕಾರ ಬ್ರಾಹ್ಮೀದೇವಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ದುರ್ಗೆ ಎಂಬ ಏಳು ಮಾತೃಕೆಯರು ಕಾಶಿಯಿಂದ ದಕ್ಷಿಣದ ಕಡೆಗೆ ವಾಯುವಿಹಾರಕ್ಕಾಗಿ ಇಲ್ಲಿಗೆ ಬಂದರು. ಅವುಗಳಲ್ಲಿ ವೈಷ್ಣವಿ, ವರಾಹಿ ಮತ್ತು ಇಂದ್ರಾಣಿ, ಈ ಮೂವರೂ ಹುತ್ತದಲ್ಲಿ ನೆಲೆಸಿದ ಸ್ಥಳ ಹಾಸನಾಂಬೆಯ ದೇವಾಲಯವಾಗಿದೆ. ಹಾಸನ ನಗರದ ಹೃದಯ ಭಾಗದಲ್ಲಿರುವ ದೇವಿಕೆರೆಯಲ್ಲಿ ಬ್ರಾಹ್ಮಿದೇವಿ ಮತ್ತು ಕೆಂಚಮ್ಮ ದೇವಿ ಹೊಸಕೋಟೆಯಲ್ಲಿ ನೆಲೆಸಿದ್ದಾರೆ.
ಭೇಟಿ ನೀಡಿ