ಹಾಲುವಾಗಿಲು ಜಲಪಾತವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿನಲ್ಲಿ ಇರುವ ಒಂದು ಪ್ರವಾಸಿ ತಾಣವಾಗಿದೆ. ಇದು ಒಂದು ಚಿಕ್ಕ ಚೆಕ್ಡ್ಯಾಮ್ ಆಗಿದ್ದು, ಈ ಸ್ಥಳವು ಹಾಸನ–ಮಂಗಳೂರು ಹೆದ್ದಾರಿಯ ಸಮೀಪದಲ್ಲಿದೆ. ಪ್ರಕೃತಿಯನ್ನು ಅನ್ವೇಷಿಸಲು ಇದು ಅದ್ಭುತವಾದ ಸ್ಥಳವಾಗಿದ್ದು, ಸುಂದರವಾದ ನೀರಿನ ಹರಿವು ಮನಸ್ಸಿಗೆ ಸಂತೋಷದ ಅನುಭವವನ್ನು ನೀಡುತ್ತದೆ.
ಹಾಲುವಾಗಿಲು ಜಲಪಾತದ ದೂರಗಳು
- ಬೆಂಗಳೂರು – 190 ಕಿ.ಮೀ
- ಹಾಸನ – 8 ಕಿ.ಮೀ
- ಹಾಸನ ರೈಲ್ವೆ ನಿಲ್ದಾಣ – 10 ಕಿ.ಮೀ
ಹಾಸನದ ಹಾಲುವಾಗಿಲು ಜಲಪಾತವು ಭಾರೀ ಗಮನ ಸೆಳೆಯುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳ ನಡುವೆ ಇದು ಸ್ವಲ್ಪ ವಿಭಿನ್ನವಾದರೂ, ನೋಡಲು ಅತ್ಯಂತ ಆಕರ್ಷಣೀಯವಾಗಿದೆ. ತನ್ನ ಸೌಂದರ್ಯದಿಂದಲೇ ಮೋಡಿ ಮಾಡುವ ಈ ಹಾಲುವಾಗಿಲು ಜಲಪಾತ (Haluvagilu Falls) ಹಾಲಿನ ನೊರೆಯಂತೆ ಧುಮ್ಮಿಕ್ಕುವುದು ವಿಶೇಷವಾಗಿದೆ.
ಭೇಟಿ ನೀಡಿ





