ಅವಳಿ ದೇವಾಲಯಗಳಾದ ನಾಗೇಶ್ವರ-ಚೆನ್ನಕೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯಲ್ಲಿ ಇದೆ. ೧೧ನೇ ಶತಮಾನದ ಹೊಯ್ಸಳ ವಾಸ್ತುಶಿಲ್ಪಕ್ಕೆ ಇಲ್ಲಿನ ಅವಳಿ ದೇವಾಲಯಗಳಾದ ನಾಗೇಶ್ವರ-ಚೆನ್ನಕೇಶ್ವರ ದೇವಾಲಯ ಪ್ರಸಿದ್ಧವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಹಾಸನದ ಜಿಲ್ಲೆಯಲ್ಲಿ ಮೊಸಳೆ ಎಂಬ ಗ್ರಾಮದಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಮೊಸಳೆ ಎಂಬ ಗ್ರಾಮವು ಅನೇಕ ಪುರಾತತ್ವ ಹಾಗೂ ಪ್ರಾಚೀನ ವೈಶಿಷ್ಟ್ಯತೆಯಿಂದ ಕೂಡಿದೆ.
ನಾಗೇಶ್ವರ-ಚೆನ್ನಕೇಶ್ವರ ದೇವಾಲಯವು ಬೆಂಗಳೂರಿನಿಂದ ಸುಮಾರು 186 ಕಿ.ಮೀ ಮತ್ತು ಹಾಸನ ನಗರದಿಂದ ಸುಮಾರು 13 ಕಿ.ಮೀ ದೂರದಲ್ಲಿದೆ. ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 14 ಕಿ.ಮೀ ದೂರದಲ್ಲಿದೆ
ಈ ದೇವಸ್ಥಾನದ ಸಮಯ ಬೆಳಿಗ್ಗೆ 7:00 ರಿಂದ ಮಧ್ಯಾಹ್ನ 12:00 ಮತ್ತು ಮಧ್ಯಾಹ್ನ 4:30 ರಿಂದ ರಾತ್ರಿ 8:30 ರವರೆಗೆ ತೆರೆದಿರುತ್ತದೆ.
ಈ ದೇವಾಲಯವನ್ನು ಕ್ರಿ. ಶ 1200 ರ ಆಸುಪಾಸಿನಲ್ಲಿ ಹೊಯ್ಸಳರ ಆಳ್ವಿಕೆಯಲ್ಲಿ ಹೊಯ್ಸಳರ ರಾಜ ಎರಡನೇ ವೀರ ಬಲ್ಲಾಳ ಅತ್ಯದ್ಭುತವಾಗಿ ನಿರ್ಮಿಸಿ, ನಿರ್ಮಾಣ ಮಾಡಿರುನವನೆಂದು ಇತಿಹಾಸ ಹೇಳುತ್ತದೆ.
ಚೆನ್ನಕೇಶವ ದೇವಸ್ಥಾನವು ಗರುಡ, ಕೇಶವ, ಜನಾರ್ಧನ, ವೇಣುಗೋಪಾಲ, ಮಾಧವ ಮತ್ತು ಭೂದೇವಿಯ ಪ್ರತಿಮೆಗಳನ್ನು ಹೊಂದಿದೆ. ಇಲ್ಲಿ ವಿಷ್ಣು ಸಂಬಂಧಿಸಿದ ವಿಷ್ಣುವಿನ ವಿಗ್ರಹವನ್ನು ಕಾಣಬಹುದು. ಈ ದೇವಾಲಯದ ಗೋಡೆಯ ತಳದಲ್ಲಿ ಕಲ್ಲುಗಳನ್ನು ಸಾಲಾಗಿ ಜೋಡಿಸಿ ಮಡಿದ ಅಲಂಕಾರವಾಗಿದೆ.
ನಾಗೇಶ್ವರ ದೇವಸ್ಥಾನದಲ್ಲಿ ಚಾಮುಂಡೇಶ್ವರಿ, ಸಪ್ತಮಾರ್ಥಿಕೆ, ಶಿವ, ದುರ್ಗಾ ದೇವಿಯ 07 ವಿಗ್ರಹಗಳು, ಗಣಪತಿ, ಶಾರದಾ ಮತ್ತು ಇತರ ದೇವತೆ ವಿಗ್ರಹಗಳಲ್ಲಿ ನಾಗೇಶ್ವರ ವಿಗ್ರಹವು ಪ್ರಮುಖ ಆಕರ್ಷಣೆಯಾಗಿದೆ. ಈ ದೇವಸ್ಥಾನಗಳ ಮೇಲೆ ಕಲಶ ಮತ್ತು ಹೊಯ್ಸಳರ ಚಿಹ್ನೆ ಕೂಡಿಡಂತೆ ಒಳಗೆ ಮತ್ತು ಹೊರಗಿನ ಗೋಡೆಗಳನ್ನು ಸಂಕೀರ್ಣ ಕೆತ್ತನೆಗಳಿಂದ ತುಂಬಲಾಗಿದೆ. ಹೊಯ್ಸಳ ವಾಸ್ತುಶಿಲ್ಪ ಮಾದರಿಯಲ್ಲಿ ನಿರ್ಮಿಸಲಾದ, ನಾಗೇಶ್ವರ ಮತ್ತು ಚೆನ್ನಕೇಶವ ಕೇಶವ ದೇವರಿಗೆ ಮೀಸಲಾಗಿರುವ ಅವಳಿ ದೇವಾಲಯಗಳು ಕ್ರಮವಾಗಿ ಪಕ್ಕ ಪಕ್ಕದಲ್ಲಿ ಕೆಲವು ಅಡಿ ಅಂತರದಲ್ಲಿ ನಿರ್ಮಿಸಲಾಗಿದೆ.
ಹೊಯ್ಸಳ ವಾಸ್ತುಶಿಲ್ಪದ ಎಲ್ಲಾ ವೈಶಿಷ್ಟ್ಯಗಳ ಜೊತೆ, ಸರಳ ಏಕೈಕ ಗೋಪುರಗಳ ರಚನೆಗಳು. ಪ್ರವೇಶದಲ್ಲಿ ಚೌಕಾಕಾರದ ಮುಖಮಂಟಪ. ಬ್ರಹತ್ ಗಾತ್ರದ ಗೋಪುರದ ‘ಶಿಖರ’ವು ದೇವಾಲಯಕ್ಕೆ ಮನೋಹರತೆ ನೀಡುತ್ತದೆ. ಗರ್ಭಗುಡಿಯು ಮುಂದಿನ ಒಂದು ರಂಗಮಂಟಪಗೆ ಸೇರಿಕೊಂಡಿರುತ್ತದೆ. ದೇವಾಲಯದ ಮೇಲ್ಭಾಗವು ಗೋಳಾಕಾರವಾಗಿದ್ದು. ಗುಮ್ಮಟದ ಕೆತ್ತನೆಯ ವೈಶಿಷ್ಟ್ಯಗಳು ಅತಿ ಸುಂದರವಾಗಿದೆ. ಈ ಗೋಳಾಕಾರದ ಗುಮ್ಮಟದ ವಿನ್ಯಾಸವು ದೇವಾಲಯ ಶಿಲ್ಪಕಲೆಯ ದೊಡ್ಡ ಆಕರ್ಷಣೆವಾಗಿದೆ. ಗೋಪುರದ ತುದಿಯಲ್ಲಿ ಕಲಶವಿದ್ದು, ಇದು ಒಂದು ಅಲಂಕಾರಿಕ ನೀರಿನ ಮಡಕೆ ಎಂತೆ ಬಿಂಬಿಸುತ್ತದೆ.
ದೇವಾಲಯದ ಮುಖ್ಯ ದ್ವಾರವು ಪೂರ್ವಕ್ಕೆ ಮುಖ ಮಾಡಿದೆ. ಈ ದೇವಾಲಯವು ಏಕಕೂಟ ದೇವಾಲಯಗಳ ಗುಂಪಿಗೆ ಸೇರುತ್ತದೆ. ದೇವಾಲಯದ ಹೊರ ಗೋಡೆಯ ಮೇಲೆ ಕಂಡುಬರುವ ಅಲಂಕಾರಿಕ ವೈಶಿಷ್ಟ್ಯಗಳು ಪ್ರಾಚೀನ ರೀತಿಯದ್ದಾಗಿದ್ದು, ಈ ರೀತಿಯ ಅಲಂಕಾರಗಳು ಗೋಪುರದ ಕೆಳಗೆ ಪ್ರಾರಂಭವಾಗಿ ದೇವಾಲಯದ ಸುತ್ತ ಕಾಣಸಿಗುತ್ತದೆ. ಸೂರಿನ ಕೆಳಗೆ ಗೋಡೆಗಂಬಗಳ ಮೇಲೂ ಅಲಂಕಾರಿಕ ಕೆತ್ತನೆಗಳಿವೆ. ಪ್ರಾಚೀನ ರೀತಿಯ ದೇವಾಲಯಗಳ ಹಾಗೆ ದೇವತೆಗಳ ದೊಡ್ಡ ಚಿತ್ರಗಳನ್ನು ಮತ್ತು ಮೂರ್ತಿಗಳನ್ನು ಗೋಪುರದ ಕೆಳಗೆ ಅಲಂಕಾರಿತ ಗೋಡೆಗನುಗುಣವಾಗಿ ಇರಿಸಲಾಗಿದೆ. ಅಲ್ಲಿ ಕಂಡುಬರುವ ಕೆಲವು ವಿಗ್ರಹಗಳಲ್ಲಿ ಪ್ರಮುಖವಾದವುಗಳು, ಶ್ರೀದೇವಿ, ಗೌರಿ, ಮಹೇಶ್ವರಿ ಮತ್ತು ಭೂದೇವಿಯ ಚಿತ್ರಗಳು ಸೇರಿದಂತೆ, ಬ್ರಹ್ಮ, ಲಕ್ಷ್ಮೀನಾರಾಯಣ, ಶಿವನ ಚಿತ್ರಗಳಿವೆ.
ಚೆನ್ನಕೇಶವ ಕೇಶವ ಗರ್ಭಗುಡಿಯಲ್ಲಿ ಆರು ಅಡಿಗಳ ಸುಂದರವಾಗಿ ಕೆತ್ತನೆ ಮಾಡಿರುವ ಚೆನ್ನಕೇಶವ ಕೇಶವ ಮೂರ್ತಿಯು ಕಂಗೊಳಿಸುತ್ತದೆ. ಚೆನ್ನಕೇಶವ ಕೇಶವ ಮೂರ್ತಿಯ ಎರಡೂ ಬದಿಗಳಲ್ಲಿ ಇರಿಸಿರುವ ಶ್ರೀದೇವಿ ಮತ್ತು ಭೂದೇವಿ ವಿಗ್ರಹವು ಆಕರ್ಷಕವಾಗಿವೆ. ಗರ್ಭದ್ವಾರವು ಒಂದು ಗಜಲಕ್ಷ್ಮೀಯನ್ನು ಹೊಂದಿದೆ. ಕಮಲದ ಆಕಾರದ ರಂಗಮಂಟಪದಲ್ಲಿ ಇಂದ್ರ, ಅಗ್ನಿ, ವರುಣ, ಮತ್ತು ವಾಯುಯನ್ನು ಕಲಾತ್ಮಕವಾಗಿ ಕೆತ್ತಲಾಗಿದೆ.
ಸುಣ್ಣದ ಕಲ್ಲಿನಿಂದ ನಿರ್ಮಿಸಲಾಗಿರುವ ಈ ಪವಿತ್ರ ದೇವಾಲಯದಲ್ಲಿ ಒಂದು ಸುಕಾನಸಿ, ಒಂದು ನವರಂಗ ಮತ್ತು ಎರಡೂ ಬದಿಯಲ್ಲಿ ಜಗತಿ ಮುಖಮಂಟಪ ಒಳಗೊಂಡಿರುತ್ತವೆ. ಚೆನ್ನಕೇಶವ ಮೂರ್ತಿಯ ಹಿಂಬದಿಯಲ್ಲಿ ಪ್ರಬಾವಳಿ ವಿಷ್ಣುವಿನ ಅವತಾರಗಳಾದ ಮತ್ಸ್ಯ, ಕೂರ್ಮ, ಮತ್ತು ವರಾಹ ಪ್ರತಿನಿಧಿಸುತ್ತವೆ. ವಿನ್ಯಾಸಗೊಳಿಸಿರುವ ಗೋಡೆಯ ಮೇಲೆ ಅಷ್ಟದಿಕ್ಪಾಲಕರು ತಮ್ಮ ವಾಹನದ ಮೇಲೆ ಕುಳಿತಿರುವ ಚಿತ್ರಗಳು ಕಾಣಸಿಗುತ್ತದೆ.
ಇತಿಹಾಸ
ಹಳೆಯ ಕಥೆಗಳ ಪ್ರಕಾರ ಪ್ರಾಚೀನ ಕಾಲದಲ್ಲಿ ಜಮದಗ್ನಿ ಮಹರ್ಷಿಗಳು ಈ ಸ್ಥಳದಲ್ಲಿ ಕುಟೀರವನ್ನು ನಿರ್ಮಿಸಿ ವಾಸಿಸುತ್ತಿದ್ದರು. ಈ ಗ್ರಾಮದ ಹೆಸರು ಹಿಂದೆ “ಮುಸಲ” ಅಂದರೆ ಕುಟ್ಟಾಣಿ ಎಂದು ಕರೆಯಲಾಗುತ್ತಿತ್ತು. ಮೊಸಳೆ ಗ್ರಾಮ ಅಥವಾ ಮೊಸಳೆ ಹೊಸಹಳ್ಳಿ, ಹಾಸನ ತಾಲ್ಲೂಕಿನ ಆಕರ್ಷಕ ಎರಡು ದೇವಾಲಯಗಳ ನೈಸರ್ಗಿಕ ದೃಶ್ಯಾವಳಿ ನಡುವೆ ಇರುವ ಒಂದು ಸಣ್ಣ ಗ್ರಾಮವಾಗಿದೆ . ಎರಡು ದೇವಾಲಯಗಳು ಅದರ ಶ್ರೀಮಂತ ವಾಸ್ತುಶಿಲ್ಪದ ಶೈಲಿಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ಇಲ್ಲಿರುವ ಎರಡು ದೇವಾಲಯಗಳ ಪುರಾತನ ವಾಸ್ತುಶಿಲ್ಪದ ಹೊಯ್ಸಳ ಶೈಲಿಯಿಂದ ಹೆಸರುವಾಸಿಯಾಗಿವೆ.
ಭೇಟಿ ನೀಡಿ