ಕಾಗಿನೆಲೆ ಉದ್ಯಾನ (ಕನಕಲೋಕ)ವು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲ್ಲೂಕಿನ ಕಾಗಿನೆಲೆ ಗ್ರಾಮದಲ್ಲಿರುವ ಸುಂದರ ಉದ್ಯಾನವಾಗಿದೆ. ಈ ಉದ್ಯಾನವನ್ನು ಕನ್ನಡದ ಮಹಾನ್ ಸಂತಕವಿ ಕನಕದಾಸರ ಸ್ಮರಣಾರ್ಥ ನಿರ್ಮಿಸಲಾಗಿದೆ. ಈ ಉದ್ಯಾನವನ್ನು “ಕನಕಲೋಕ” ಎಂದು ಕರೆಯಲಾಗುತ್ತದೆ.
ಕಾಗಿನೆಲೆ ಉದ್ಯಾನವು ಕನಕದಾಸರ ದೇವಸ್ಥಾನದಿಂದ ಸುಮಾರು 2 ಕಿ.ಮೀ ದೂರದಲ್ಲಿದ್ದು, ಪ್ರಕೃತಿ ಸೌಂದರ್ಯ ಹಾಗೂ ಶಾಂತ ವಾತಾವರಣದಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಕಾಗಿನೆಲೆ ಉದ್ಯಾವನದ ದೂರಗಳು
- ಬೆಂಗಳೂರು – 348 ಕಿ.ಮೀ
- ಹಾವೇರಿ – 16 ಕಿ.ಮೀ
- ಬ್ಯಾಡಗಿ – 21 ಕಿ.ಮೀ
- ಬ್ಯಾಡಗಿ ರೈಲ್ವೆ ನಿಲ್ದಾಣ – 23 ಕಿ.ಮೀ
- ಹಾವೇರಿ ರೈಲ್ವೆ ನಿಲ್ದಾಣ – 18 ಕಿ.ಮೀ
ಕನಕದಾಸರ ಜೀವನದ ಪ್ರಮುಖ ಘಟನೆಗಳನ್ನು ಆಧರಿಸಿ ಈ ಉದ್ಯಾನವನ್ನು ನಿರ್ಮಿಸಲಾಗಿದೆ. ಕನಕದಾಸರು ತಮ್ಮ ಜೀವನದ ಬಹುಭಾಗವನ್ನು ಕಳೆದ ಹಾಗೂ ಕೊನೆಯ ದಿನಗಳನ್ನು ಕಳೆದ ಪವಿತ್ರ ಸ್ಥಳದಲ್ಲಿಯೇ ಈ ಉದ್ಯಾನವನವನ್ನು ಅಭಿವೃದ್ಧಿಪಡಿಸಲಾಗಿದೆ.
ಇಲ್ಲಿ ಕನಕದಾಸರ ಜೀವನದ ಹಲವು ಮಹತ್ವದ ಘಟನೆಗಳನ್ನು ಸುಂದರ ಶಿಲ್ಪಗಳ ಮೂಲಕ ಚಿತ್ರಿಸಲಾಗಿದೆ. ಈ ಶಿಲ್ಪಗಳು ಅವರ ಜೀವನ, ಆದರ್ಶಗಳು ಹಾಗೂ ಆಧ್ಯಾತ್ಮಿಕ ಸಂದೇಶಗಳನ್ನು ಪರಿಚಯಿಸುತ್ತವೆ. ಉದ್ಯಾನದಲ್ಲಿ ಮಕ್ಕಳಿಗಾಗಿ ಸುಸಜ್ಜಿತ ಆಟದ ಪ್ರದೇಶವಿದ್ದು, ಕುಟುಂಬ ಸಮೇತ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳವಾಗಿದೆ. ಹಸಿರು ಪರಿಸರ, ಸ್ವಚ್ಛತೆ ಮತ್ತು ಉತ್ತಮ ನಿರ್ವಹಣೆಯಿಂದ ಈ ಉದ್ಯಾನವು ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಭೇಟಿ ನೀಡಿ





