ತಿಮ್ಲಾಪುರ ವನ್ಯಜೀವಿ ಅಭಯಾರಣ್ಯ

ತಿಮ್ಲಾಪುರ ವನ್ಯಜೀವಿ ಅಭಯಾರಣ್ಯವು ಕರ್ನಾಟಕ ರಾಜ್ಯದ ತುಮಕೂರಿನ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿದೆ. ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 36-ಎ ಅಡಿಯಲ್ಲಿ ಇದನ್ನು ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಈ ಅಭಯಾರಣ್ಯವು 17.38 ಚದರ ಕಿ.ಮೀ ವಿಸ್ತೀರ್ಣದೊಂದಿಗೆ ತಿಮ್ಲಾಪುರ ಸಂರಕ್ಷಣಾ ಮೀಸಲು” ಯಿಂದ ಸುತ್ತುವರೆದಿದೆ.

ಈ ಅಭಯಾರಣ್ಯವು ಬೆಂಗಳೂರಿನಿಂದ 125 ಕಿ.ಮೀ ಮತ್ತು ತುಮಕೂರು ನಗರದಿಂದ 46 ಕಿ.ಮೀ ದೂರದಲ್ಲಿದೆ. ಹಾಗು ಮಧುಗಿರಿ ನಗರದಿಂದ ಕೇವಲ 15 ಕಿ.ಮೀ ಮತ್ತು ಕೊರಟಗೆರೆಯಿಂದ 32 ಕಿ.ಮೀ ದೂರದಲ್ಲಿದೆ.

ತಿಮ್ಲಾಪುರ ವನ್ಯಜೀವಿ ಅಭಯಾರಣ್ಯವನ್ನು 50.86 ಚದರ ಕಿ.ಮೀ ವಿಸ್ತೀರ್ಣದೊಂದಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ-1972 (2006 ರಲ್ಲಿ ತಿದ್ದುಪಡಿ) (1972 ರ ಕೇಂದ್ರ ಕಾಯ್ದೆ 53) ರ ಸೆಕ್ಷನ್ 36-ಎ ಅಡಿಯಲ್ಲಿ ಘೋಷಿಸಲಾಗಿದೆ. ಇದು ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನಲ್ಲಿದ್ದು, ಮದ್ದಗಿರಿ ಮತ್ತು ಚಿಕ್ಕಮದ್ದಗಿರಿ ಆರ್.ಎಫ್ ಅನ್ನು ಒಳಗೊಂಡಿದೆ. ಈ ಅರಣ್ಯ ಪ್ರದೇಶಗಳು ಸ್ಲಾತ್ ಕರಡಿಗಳು, ಚಿರತೆಗಳು, ಕತ್ತೆಕಿರುಬಗಳು, ಮುಳ್ಳುಹಂದಿ, ಕಾಡುಹಂದಿಗಳು, ನರಿ, ಭಾರತೀಯ ನರಿಗಳಿಗೆ ಸೂಕ್ತವಾದ ಆವಾಸಸ್ಥಾನವಾಗಿದೆ.

ಭೇಟಿ ನೀಡಿ
ಕೊರಟಗೆರೆ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು