ವಿಲಿಯಂ ಆರ್ಥರ್ ಸ್ಮಾರಕ ಚರ್ಚ್ ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಗುಬ್ಬಿ ಪಟ್ಟಣದಲ್ಲಿ ಬೆಂಗಳೂರು–ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿರುವ ಐತಿಹಾಸಿಕ ಚರ್ಚ್ ಆಗಿದೆ. ಕೆಂಪು ಇಟ್ಟಿಗೆಗಳಿಂದ ಗೋಥಿಕ್ ವಾಸ್ತುಶೈಲಿಯಲ್ಲಿ ನಿರ್ಮಿಸಲಾದ ಈ ಚರ್ಚ್ 1904ರಲ್ಲಿ ಪೂರ್ಣಗೊಂಡಿತು.
ಗುಬ್ಬಿ ಪ್ರದೇಶದಲ್ಲಿ ಸೇವೆ ಸಲ್ಲಿಸಿದ ಐರಿಷ್ ವೆಸ್ಲಿಯನ್ ಮಿಷನರಿ ಹಾಗೂ ಕನ್ನಡ ಭಾಷೆಯ ವಿದ್ವಾಂಸರಾದ ವಿಲಿಯಂ ಆರ್ಥರ್ ಅವರ ಸ್ಮರಣಾರ್ಥ ಈ ಚರ್ಚ್ಗೆ “ವಿಲಿಯಂ ಆರ್ಥರ್ ಸ್ಮಾರಕ ಚರ್ಚ್” ಎಂದು ಹೆಸರಿಡಲಾಗಿದೆ. ಈ ಚರ್ಚ್ ತನ್ನ ವಿಶಿಷ್ಟ ಗೋಥಿಕ್ ವಾಸ್ತುಶಿಲ್ಪ ಮತ್ತು ಐತಿಹಾಸಿಕ ಮಹತ್ವದಿಂದ ಜಿಲ್ಲೆಯ ಪ್ರಮುಖ ಕ್ರೈಸ್ತ ಧಾರ್ಮಿಕ ಸ್ಮಾರಕಗಳಲ್ಲಿ ಒಂದಾಗಿದೆ.
CSI ವಿಲಿಯಂ ಆರ್ಥರ್ ಮೆಮೋರಿಯಲ್ ಚರ್ಚಿನ ದೂರಗಳು
- ಬೆಂಗಳೂರು – 89 ಕಿ.ಮೀ
- ತುಮಕೂರು – 19 ಕಿ.ಮೀ
- ಗುಬ್ಬಿ – 1 ಕಿ.ಮೀ
- ಗುಬ್ಬಿ ರೈಲ್ವೆ ನಿಲ್ದಾಣ – 3 ಕಿ.ಮೀ
ಭೇಟಿ ನೀಡಿ


