ಗೋಸಲ ಚನ್ನಬಸವೇಶ್ವರ ದೇವಾಲಯ ಗುಬ್ಬಿ

ಗೋಸಲ ಚನ್ನಬಸವೇಶ್ವರ ದೇವಾಲಯವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿರುವ ಒಂದು ಪ್ರಖ್ಯಾತ ದೇವಾಲಯವಾಗಿದೆ. ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು 15ನೇ ಶತಮಾನದಲ್ಲಿ ನೆಲೆಸಿದ್ದಂತ ಒಬ್ಬ ಶಿವಯೋಗಿಗಳು ಮತ್ತು ಪವಾಡ ಪುರುಷರು ಆಗಿದ್ದರು. ಧರ್ಮ ಜಾಗೃತಿ ಕಾರ್ಯಕಾಗಿ ಲೋಕ ಸಂಚಾರ ಮಾಡುತ್ತ ಇದ್ದರು. ಜನಸಾಮಾನ್ಯರಿಗೆ ಹತ್ತಿರವಾಗಿದ್ದ ಇವರು ಹಲವಾರು ಪವಾಡಗಳನ್ನು ಮಾಡುವ ಮೂಲಕ ಮನೆ ಮಾತಾಗಿದ್ದರೂ. ಯಡಿಯೂರು ಕ್ಷೇತ್ರದ ಶ್ರೀ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಗಳಿಗೆ ದೀಕ್ಷೆಯನ್ನು ನೀಡಿದಂತ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಈ ಯೋಗಿಗಳು ಲಿಂಗೈಕರಾದಂತ ಈ ಸ್ಥಳವನ್ನು ಇಂದು ಬೃಹತ್ ದೇಗುಲವನ್ನು ನಿರ್ಮಿಸಲಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ 93 ಕಿ.ಮೀ ದೂರದಲ್ಲಿದೆ ಮತ್ತು ತುಮಕೂರಿನಿಂದ 22 ಕಿ.ಮೀ ದೂರದಲ್ಲಿದೆ. ಹಾಗೂ ಗುಬ್ಬಿ ತಾಲೂಕಿನಿಂದ ಕೇವಲ 3 ಕಿ.ಮೀ ದೂರದಲ್ಲಿದೆ.

ಈ ದೇಗುಲವನ್ನು ಗುಬ್ಬಿ ಪಟ್ಟಣದ ಕಿರೀಟವೆಂದೆ ಪರಿಗಣಿಸಲಾಗುತ್ತದೆ. ತುಮಕೂರು ಜಿಲ್ಲೆಯ ಗುಬ್ಬಿ ಒಂದು ಐತಿಹಾಸಿಕ ತಾಣ. ಪ್ರಾಚೀನ ಕಾಲದಲ್ಲಿ ಗುಬ್ಬಿಯನ್ನು ಅಮರಕೊಂಡ ಎಂದು ಕರೆಯಲಾಗುತ್ತಿತ್ತು. ನಂತರ ಗುಬ್ಬಿ ಎಂದು ಹೆಸರು ಬರಲು ಒಂದು ಐತಿಹಾಸಿಕ ಕಾರಣವೂ ಕೂಡ ಇದೆ. ಈ ಊರಿನಲ್ಲಿ ಗದ್ದೆ ಮಲ್ಲೇಶ್ವರ ಎಂಬ ಪ್ರಾಚೀನ ಆಲಯ ಇತ್ತು. ಆ ಆಲಯದಲ್ಲಿ ಪ್ರವಚನ ಸೇರಿದಂತೆ ಪ್ರತಿನಿತ್ಯ ಹಲವು ಪುಣ್ಯಕಾರ್ಯಗಳು ಜರುಗುತ್ತಿದ್ದವು. ಆ ಹಿತಕರವಾದ ಪ್ರವಚನವನ್ನು ಕೇಳಲು ಎರಡು ಗುಬ್ಬಿ ಮರಿಗಳು ಬಂದು ಕುಳಿತುಕೊಳ್ಳುತ್ತಿದ್ದವಂತೆ. ಹೀಗೆ ಪ್ರವಚನವನ್ನು ಕೇಳುತ್ತಾ ಕೇಳುತ್ತಾ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವಂತೆ. ಆ ಕಾರಣದಿಂದಲೇ ಈ ಸ್ಥಳಕ್ಕೆ ಗುಬ್ಬಿ ಎಂದು ಹೆಸರು ಬಂದಿದೆ. ಇಂದಿಗೂ ಸಹ ಗದ್ದೆ ಮಲ್ಲೇಶ್ವರ ದೇವಾಲಯದಲ್ಲಿ ಗುಬ್ಬಿಗಳ ಸಮಾಧಿ ಇದೆ. ಗುಬ್ಬಿಗಳಿಗೆ ಸದ್ಗತಿಯು ಪ್ರಾಪ್ತಿಗೊಂಡ ನಂತರ, ಈ ಕ್ಷೇತ್ರ ಶಿವಶರಣರಿಗೆ ಆಶ್ರಯ ತಾಣವಾಯಿತು. ಗುಬ್ಬಿ ಕ್ಷೇತ್ರದಲ್ಲಿ ಆಶ್ರಯ ಪಡೆದ ಶಿವಶರಣದಲ್ಲಿ ಪ್ರಮುಖರು ಶ್ರೀ ಗೋಸಲ ಚನ್ನಬಸವೇಶ್ವರ ಸ್ವಾಮಿಗಳು. ಗುಬ್ಬಿಯಲ್ಲಿ ವೀರಶೈವ ಧರ್ಮವನ್ನು ಉಳಿಸಿ ಬೆಳೆಸಿದ ಶ್ರೀ ಗೋಸಲ ಸ್ವಾಮಿ ದೇವಾಲಯವು ಒಂದು ಪುಣ್ಯಕ್ಷೇತ್ರದ ಜೊತೆಗೆ ಸಾಂಸ್ಕೃತಿಕ ಸ್ಥಳವಾಗಿ ಬೆಳೆದಿದೆ.

ಭೇಟಿ ನೀಡಿ
ಗುಬ್ಬಿ ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ತುಮಕೂರು ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು