ಗ್ರೋವರ್ ಝಂಪಾ ವೈನ್‌ಯಾರ್ಡ್ಸ್‌ವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB)ಯ ಒಬದನೇಹಳ್ಳಿ ಕೈಗಾರಿಕಾ ಪ್ರದೇಶದ 3ನೇ ಹಂತದಲ್ಲಿ ಇರುವ ವೈನ್ ತಯಾರಿಕಾ ಕೇಂದ್ರವಾಗಿದೆ. ಸುಮಾರು ಮೂರು ತಲೆಮಾರುಗಳ ವೈನ್ ತಯಾರಿಕೆಯ ಅನುಭವವನ್ನು ಹೊಂದಿರುವ ಈ ಸಂಸ್ಥೆಯು ಭಾರತದ ಅತ್ಯಂತ ಹಳೆಯ ವೈನ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಪ್ರೀಮಿಯಂ ವೈನ್‌ಗಳ ವಿಶಿಷ್ಟ ಉತ್ಪಾದಕವಾಗಿಯೂ ಹೆಸರುವಾಸಿಯಾಗಿದೆ.
ಗ್ರೋವರ್ ಝಂಪಾ ವೈನ್‌ಯಾರ್ಡ್ಸ್ ನ ದೂರಗಳು
- ಬೆಂಗಳೂರು – 45 ಕಿ.ಮೀ
- ದೊಡ್ಡಬಳ್ಳಾಪುರ – 6 ಕಿ.ಮೀ
- ನಂದಿ ಬೆಟ್ಟ – 21 ಕಿ.ಮೀ
ಗ್ರೋವರ್ ಝಂಪಾ ವೈನ್‌ಯಾರ್ಡ್ಸ್ ತನ್ನ ಶ್ರೀಮಂತ ಇತಿಹಾಸ, ಪ್ರಶಾಂತ ಪರಿಸರ ಹಾಗೂ ಸುಂದರ ನೈಸರ್ಗಿಕ ದೃಶ್ಯಗಳೊಂದಿಗೆ ಭಾರತೀಯ ವೈನ್ ಸಂಸ್ಕೃತಿಯನ್ನು ಅನುಭವಿಸಲು ಅನನ್ಯ ಸ್ಥಳವಾಗಿದೆ. ಇಲ್ಲಿನ ಪ್ರವಾಸ ಕಾರ್ಯಕ್ರಮಗಳಲ್ಲಿ ದ್ರಾಕ್ಷಿತೋಟಕ್ಕೆ ಭೇಟಿ, ವೈನ್ ತಯಾರಿಕಾ ಪ್ರಕ್ರಿಯೆಯ ಮಾರ್ಗದರ್ಶಿತ ಪ್ರವಾಸ ಹಾಗೂ ಊಟದ ನಂತರ ಸೊಮೆಲಿಯರ್‌ನಿಂದ ವೈನ್ ರುಚಿ ನೋಡುವ ಅನುಭವವನ್ನು ಒಳಗೊಂಡಿರುತ್ತದೆ.
ದ್ರಾಕ್ಷಿ ತೋಟದ ಪ್ರವಾಸವನ್ನು ಯೋಜಿಸಲು ಮೂರು ಹಂತದ ಸಮಯ
- 1st Slot – 10:30 AM
- 2nd Slot – 12:00 PM
- 3rd Slot – 2:00 PM
ಪ್ರವಾಸಕ್ಕಾಗಿ ಮುಂಗಡವಾಗಿ ದೂರವಾಣಿ ಮೂಲಕ ಸ್ಲಾಟ್ ಅನ್ನು ಕಾಯ್ದಿರಿಸಬಹುದು. ಸಂಪರ್ಕ ಸಂಖ್ಯೆ: +91 8956 011 693. ಕರೆ ಮಾಡುವ ಸಮಯ ಬೆಳಿಗ್ಗೆ 9:00 ರಿಂದ ಸಂಜೆ 7:00 ರವರೆಗೆ.
ಸ್ಲಾಟ್ ಕಾಯ್ದಿರಿಸುವಾಗ ಯಾವುದೇ ಮೊತ್ತವನ್ನು ಮುಂಗಡವಾಗಿ ಪಾವತಿಸುವ ಅಗತ್ಯವಿಲ್ಲ. ಗ್ರೋವರ್ ಝಂಪಾ ವೈನ್‌ಯಾರ್ಡ್ಸ್‌ಗೆ ತಲುಪಿದ ನಂತರವೇ ಶುಲ್ಕವನ್ನು ಪಾವತಿಸಬಹುದು.
ವೈನ್ ರುಚಿ ನೋಡುವ ಕಾರ್ಯಕ್ರಮವನ್ನು ಒಳಗೊಂಡ ವೈನ್‌ಯಾರ್ಡ್ ಪ್ರವಾಸಕ್ಕೆ ಪ್ರತಿ ವ್ಯಕ್ತಿಯು ₹1,000/- ಪಾವತಿಸಬೇಕು. ವೈನ್ ರುಚಿ ನೋಡಲು ಇಚ್ಛಿಸದಿದ್ದರೆ, ಕೇವಲ ವೈನ್‌ಯಾರ್ಡ್ ಪ್ರವಾಸಕ್ಕಾಗಿ ಪ್ರತಿ ವ್ಯಕ್ತಿಗೆ ₹500/- ಶುಲ್ಕ ವಿಧಿಸಲಾಗುತ್ತದೆ.
ವೈನ್ ಪ್ರವಾಸದ ಹಂತಗಳು
ಸಂಪೂರ್ಣ ವೈನ್ ಪ್ರವಾಸವು 3 ಹಂತಗಳನ್ನು ಒಳಗೊಂಡಿದೆ.
- ವೈನರಿ – ವೈನ್ ತಯಾರಿಕೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು.
- ಬ್ಯಾರೆಲ್ ರೂಮ್ – ವೈನ್ ಅನ್ನು ಪರಿಪಕ್ವಗೊಳಿಸುವ (ವಯಸ್ಸಾಗಿಸುವ) ಪ್ರಕ್ರಿಯೆ ನಡೆಯುವ ಸ್ಥಳ.
- ವೈನ್ ಟೇಸ್ಟಿಂಗ್ – ವಿವಿಧ ಬಗೆಯ ವೈನ್‌ಗಳ ರುಚಿಯನ್ನು ಅನುಭವಿಸುವ ಅವಕಾಶ.
ಪ್ರವಾಸದ ಕೊನೆಯ ಹಂತದಲ್ಲಿ, ದ್ರಾಕ್ಷಿಯನ್ನು ಬೆಳೆಸಿ ಕೊಯ್ಲು ಮಾಡುವ ವೈನ್‌ಯಾರ್ಡ್‌ಗೆ ಭೇಟಿ ನೀಡಬಹುದು.
ಭೇಟಿ ನೀಡಿ






