ಗುಂಡಾಲ್ ಅಣೆಕಟ್ಟು ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಬಳಿಯಿರುವ ಒಂದು ಸಣ್ಣ ಜಲಾಶಯ. ಎರಡು ಬೆಟ್ಟಗಳ ನಡುವೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಬೆಟ್ಟಗಳ ನಡುವೆ ನೆಲೆಗೊಂಡಿರುವ ಇದು ಸುಂದರವಾದ ನೋಟಗಳಿಂದ ಕೂಡಿದ ಪ್ರದೇಶವಾಗಿದೆ.
ಈ ಆಣೆಕಟ್ಟು ಬೆಂಗಳೂರಿನಿಂದ 155 ಕಿ.ಮೀ ಮತ್ತು ಮೈಸೂರಿನಿಂದ ಸುಮಾರು 79 ಕಿ.ಮೀ, ಹಾಗೂ ಕೊಳ್ಳೇಗಾಲದಿಂದ 17 ಕಿ.ಮೀ ದೂರದಲ್ಲಿದೆ. ಕೊಳ್ಳೇಗಾಲದಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗುವ ದಾರಿಯಲ್ಲಿ 12 ಕಿ.ಮೀ ಕ್ರಮಿಸಿದ ನಂತರ ಬಲಕ್ಕೆ ತಿರುಗಿ 05 ಕಿ.ಮೀ ಪ್ರಯಾಣ ಮಾಡಿದರೆ ಈ ಜಲಾಶಯವನ್ನು ತಲುಪಬಹುದು.
ಗುಂಡಾಲ್ ಅಣೆಕಟ್ಟು ವೀಕ್ಷಿಸಲು ಮಾನ್ಸೂನ್ ಮತ್ತು ಚಳಿಗಾಲದಲ್ಲಿ ಭೇಟಿ ನೀಡಲು ಉತ್ತಮ ಸಮಯ. ಈ ಸಮಯದಲ್ಲಿ ಬೆಟ್ಟಗಳು ಹಸಿರಿನಿಂದ ಕೂಡಿರುತ್ತವೆ. ಇಲ್ಲಿ ಅಣೆಕಟ್ಟೆನ ಮೇಲೆ ನಡೆದಾಡಲು ಯಾವುದೇ ಅಬಿಯಂತರ ಇಲ್ಲ. ಅಣೆಕಟ್ಟಿನ ಮೇಲೆ ನಡೆದಾಡುವಾಗ ಉತ್ತಮ ಅನುಭವ ಹಾಗು ಉತ್ತಮ ಸೌಂದರ್ಯವನ್ನು ನೀಡುತ್ತದೆ. ಆಸುಪಾಸಿನಲ್ಲಿ ಕೆಲವು ಪಕ್ಷಿಗಳನ್ನು ಮತ್ತು ಬಾತುಕೋಳಿಗಳನ್ನು ನೋಡುವ ಅವಕಾಶವೂ ಸಿಗುತ್ತದೆ.
ಭೇಟಿ ನೀಡಿ