ಮಂಜರಾಬಾದ್ ಕೋಟೆ

ಮಂಜರಾಬಾದ್ ಕೋಟೆಯು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ದೋಣಿಗಾಲ್ ಎಂಬ ಊರಿನ ಸಣ್ಣ ಗುಡ್ಡದ ಮೇಲೆ ಇದೆ. ಮಂಜರಾಬಾದ್ ಕೋಟೆಯನ್ನು ಟಿಪ್ಪು ಸುಲ್ತಾನ್ 1785-1791ರ ನಡುವೆ ನಿರ್ಮಿಸಿದನು. ಈ ಕೋಟೆಯು ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿಯ, ಸಕಲೇಶಪುರದಿಂದ ಮುಂದಕ್ಕೆ 05 ಕಿ.ಮೀ ದೂರದಲ್ಲಿರುವ ದೋಣಿಗಾಲ್ ಎಂಬ ಊರಿನಲ್ಲಿ ಇದೆ.

ಮಂಜರಾಬಾದ್ ಕೋಟೆಯು ಬೆಂಗಳೂರಿನಿಂದ 274 ಕಿ.ಮೀ ಮತ್ತು ಹಾಸನದಿಂದ 44 ಕಿ.ಮೀ ದೂರದಲ್ಲಿದೆ. ಹಾಗು ಸಕಲೇಶಪುರ ದಿಂದ 05 ಕಿ.ಮೀ ದೂರದಲ್ಲಿದೆ.

ಈ ಕೋಟೆಯನ್ನು ಕಲ್ಲು ಮತ್ತು ಇಟ್ಟಿಗೆಯಿಂದ ಎರಡು ಹಂತಗಳಲ್ಲಿ ನಿರ್ಮಿಸಲಾಗಿದೆ. ಮೊದಲ ಹಂತದಲ್ಲಿ ಸುಮಾರು 12 ಅಡಿಗಳ ಎತ್ತರದ ಗೋಡೆಯನ್ನು ಕಲ್ಲಿನಿಂದ ನಿರ್ಮಿಸಿದ್ದರೆ, ಎರಡನೆ ಹಂತದಲ್ಲಿ ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಮೊದಲ ಹಂತವನ್ನು ಸಕಲೇಶಪುರ ತಾಲ್ಲೂಕು ಐಗೂರಿನ ಪಾಳೇಗಾರ ನಿರ್ಮಿಸಿದ ಎಂಬ ಮಾಹಿತಿ ಇದ್ದು, ನಂತರ ಟಿಪ್ಪುಸುಲ್ತಾನ್ ನಿಂದ ಪುನರ್ ನವೀಕರಣಗೊಂಡಿದೆ. ಆಂಗ್ಲ-ಮೈಸೂರು ಯುದ್ಧದಲ್ಲಿ ಈ ಕೋಟೆಯನ್ನು ಬಳಸಲಾಯಿತು. ಶ್ರೀರಂಗಪಟ್ಟಣದ ಪತನದ ನಂತರ ಬ್ರಿಟೀಷರು ಈ ಕೋಟೆಯನ್ನು ತಮ್ಮ ವಶಕ್ಕೆ ತೆಗೆದುಕೊಂಡ ನಂತರ ಅದರ ಕೆಲವು ಭಾಗಗಳನ್ನು ನಾಶಮಾಡಿದರೆನ್ನಲಾಗಿದೆ.

ಸುಮಾರು 250 ಮೆಟ್ಟಿಲುಗಳನ್ನು ಏರಿ ಮಂಜರಾಬಾದ್ ಕೋಟೆಯನ್ನು ತಲುಪಬೇಕು. ಸಮುದ್ರ ಮಟ್ಟದಿಂದ ಸುಮಾರು 3420 ಅಡಿ ಎತ್ತರದಲ್ಲಿದ್ದು, ಸುಮಾರು 05 ಎಕರೆ ಪ್ರದೇಶದಲ್ಲಿ ಎಂಟು ಕೋನದ ನಕ್ಷಾತ್ರಾಕಾರದಲ್ಲಿ ನಿರ್ಮಿಸಲ್ಪಟ್ಟಿದೆ ಮತ್ತು ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ.

ಸಕಲೇಶಪುರದಲ್ಲಿರುವ ಮಂಜರಾಬಾದ್ ಕೋಟೆಯು ಸುತ್ತಮುತ್ತಲಿನ ಭೂದೃಶ್ಯದ ಉಸಿರು ನೋಟಗಳನ್ನು ಮತ್ತು ಪ್ರದೇಶದ ಶ್ರೀಮಂತ ಇತಿಹಾಸದ ಒಂದು ನೋಟವನ್ನು ನೀಡುವ ಗುಪ್ತ ರತ್ನವಾಗಿದೆ. ಅತ್ಯಾಕರ್ಷಕ ಟ್ರೆಕ್ಕಿಂಗ್ ಟ್ರೇಲ್ಸ್ ಮತ್ತು ಬೆರಗುಗೊಳಿಸುವ ದೃಶ್ಯಾವಳಿಗಳೊಂದಿಗೆ, ಇದು ಸಾಹಸ ಹುಡುಕುವವರಿಗೆ ಮತ್ತು ಪ್ರಕೃತಿ ಪ್ರಿಯರಿಗೆ ಸೂಕ್ತವಾಗಿದೆ. ಕೆಲವು ಪ್ರದೇಶಗಳಿಗೆ ನಿರ್ವಹಣೆಯ ಅಗತ್ಯವಿದ್ದರೂ, ಕೋಟೆಯು ತನ್ನ ಸಾಂಸ್ಕೃತಿಕ ಮಹತ್ವ ಮತ್ತು ನೈಸರ್ಗಿಕ ಸೌಂದರ್ಯಕ್ಕಾಗಿ ಭೇಟಿ ನೀಡಲೇಬೇಕಾದ ತಾಣವಾಗಿದೆ. ಒಟ್ಟಾರೆಯಾಗಿ, ಇತಿಹಾಸ ಪ್ರಿಯರು, ಚಾರಣಿಗರು ಮತ್ತು ಛಾಯಾಗ್ರಾಹಕರಿಗೆ ಉತ್ತಮ ಸ್ಥಳ!

ಭೇಟಿ ನೀಡಿ
ಸಕಲೇಶಪುರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section