ಶ್ರೀ ಯೋಗನರಸಿಂಹ ದೇವಸ್ಥಾನ ನರಸೀಪುರ

ಶ್ರೀ ಯೋಗನರಸಿಂಹ ದೇವಾಲಯವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಳೇಬೀಡು ಹೋಬಳಿಯ ನರಸೀಪುರ ಗ್ರಾಮದಲ್ಲಿದೆ. ಈ ದೇವಾಲಯವು 13ನೇ ಶತಮಾನದ ಹೊಯ್ಸಳ ಕಾಲದ ದೇವಾಲಯವಾಗಿದೆ.

ನರಸೀಪುರ ಶ್ರೀ ಯೋಗನರಸಿಂಹ ದೇವಸ್ಥಾನದ ದೂರಗಳು

  • ಬೆಂಗಳೂರು – 210 ಕಿ.ಮೀ
  • ಹಾಸನ – 34 ಕಿ.ಮೀ
  • ಬೇಲೂರು – 16 ಕಿ.ಮೀ
  • ಹಳೇಬೀಡು – 3 ಕಿ.ಮೀ
  • ಚಿಕ್ಕಮಗಳೂರು ರೈಲ್ವೆ ನಿಲ್ದಾಣ – 32 ಕಿ.ಮೀ
  • ಹಾಸನ ರೈಲ್ವೆ ನಿಲ್ದಾಣ – 35 ಕಿ.ಮೀ

ಇಲ್ಲಿ ಹೊಯ್ಸಳರ ಕಾಲದ ತ್ರಿಕೂಟಾಚಲ ದೇವಾಲಯವಿದ್ದು, ಪ್ರಸ್ತುತ ಮುಖ್ಯ ಗರ್ಭಗುಡಿಯಲ್ಲಿ ಮಾತ್ರ ಯೋಗಮುದ್ರೆಯಲ್ಲಿರುವ ಶ್ರೀ ಯೋಗನರಸಿಂಹನ ವಿಗ್ರಹವು ಪ್ರತಿಷ್ಠಾಪಿತವಾಗಿದೆ. ಬಲಭಾಗದ ಗರ್ಭಗುಡಿಯಲ್ಲಿದ್ದ ಶ್ರೀ ಲಕ್ಷ್ಮೀನಾರಾಯಣನ ವಿಗ್ರಹವು ಭಿನ್ನಗೊಂಡಿದ್ದು, ಎಡಭಾಗದ ಗರ್ಭಗುಡಿಯಲ್ಲಿದ್ದ ವಿಗ್ರಹವು ಕಳುವಾಗಿದೆ ಎಂದು ತಿಳಿದುಬಂದಿದೆ. ಶ್ರೀ ಯೋಗನರಸಿಂಹನ ವಿಗ್ರಹವು ಸುಮಾರು 8 ಅಡಿ ಎತ್ತರವಿದ್ದು, ಅತ್ಯಂತ ಮನೋಹರವಾಗಿದೆ. ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರದ ಕೆತ್ತನೆಗಳಿದ್ದು, ಪೀಠದ ಮೇಲೆ ಗರುಡನ ಶಿಲ್ಪವಿದೆ. ದೇವಾಲಯದ ಹೊರಭಿತ್ತಿಗಳಲ್ಲಿ ಸೂಕ್ಷ್ಮ ಶಿಲ್ಪಗಳನ್ನು ಕೆತ್ತಲಾಗಿದ್ದು, ಅವು ಅತ್ಯಂತ ಅಲಂಕೃತವಾಗಿ ಕಾಣಿಸುತ್ತವೆ.

ಈ ದೇವಾಲಯದ ಒಂದು ವಿಶೇಷ ಅಂಶವೆಂದರೆ, ಆ ಕಾಲದಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಪ್ರತಿದಿನ ಲಾಡು ತಯಾರಿಸಲು ಧನಸಹಾಯ ಕಳುಹಿಸಲಾಗುತ್ತಿತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಶಿಲಾಶಾಸನವು ಸಾಕ್ಷಿಯಾಗಿದೆ.

ಭೇಟಿ ನೀಡಿ
ಬೇಲೂರು ತಾಲ್ಲೂಕಿನ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆಯ ಇತರೆ ತಾಲ್ಲೂಕು ಪ್ರವಾಸಿ ಸ್ಥಳಗಳು


Responsive Services Section