ಶ್ರೀರಾಮ ದೇವರ ಕಟ್ಟೆ

ಶ್ರೀ ರಾಮದೇವರ ಕಟ್ಟೆಯು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಕಟ್ಟೆಬೆಳಗುಳಿ ಗ್ರಾಮದಲ್ಲಿ ಇದೆ. ಈ ಚೆಕ್ ಡ್ಯಾಂ ಅನ್ನು 1870 ರಲ್ಲಿ ಅಂದಿನ ಮೈಸೂರು ಮಹಾರಾಜರು ಬ್ರಿಟಿಷ್ ಅಧಿಕಾರಿಗಳ ಸಹಾಯದಿಂದ ನಿರ್ಮಿಸಿದರು ಮತ್ತು ಬಲ ದಂಡೆ ನಾಲೆಗಳ ಮೂಲಕ ಈ ಅಣೆಕಟ್ಟೆಯಿಂದ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಇದನ್ನು ರಾಮದೇವರ ಅನೇಕಟ್ಟೆ ಅಥವಾ ಶ್ರೀ ರಾಮದೇವರ ಕಟ್ಟೆ ಎಂದು ಹೆಸರಿಸಲಾಯಿತು. ಈಗ ಜಲವಿದ್ಯುತ್ ಸ್ಥಾವರದ ಕೆಲಸ ಪ್ರಗತಿಯಲ್ಲಿದೆ. ಈ ಅಣೆಕಟ್ಟೆ ಈಗ ಪ್ರವಾಸಿ ಕ್ರೇಂದ್ರದ ಮುಖ್ಯ ಬಿಂದುವಾಗಿದೆ.

ಶ್ರೀ ರಾಮದೇವರ ಕಟ್ಟೆಯು ಬೆಂಗಳೂರಿನಿಂದ 174.2 34 ಕಿ.ಮೀ ಮತ್ತು ಹಾಸನದಿಂದ 26.1 34 ಕಿ.ಮೀ ದೂರದಲ್ಲಿದೆ. ಹಾಗು ಹಾಸನ ರೈಲ್ವೆ ನಿಲ್ದಾಣದಿಂದ ದಿಂದ 27.6 34 ಕಿ.ಮೀ ದೂರದಲ್ಲಿದೆ.

ಬೇಸಿಗೆಯಲ್ಲಿ ನೀರಿನಲ್ಲಿ ಸ್ನಾನ ಮಾಡಲು ಸೂಕ್ತ ಸ್ಥಳ. ಈ ಸ್ಥಳವು ಸುಂದರವಾದ ಪ್ರಕೃತಿಯಿಂದ ಆವೃತವಾಗಿದೆ. ಇದು ಐತಿಹಾಸಿಕ ನೀರಿನ ಸಂಗ್ರಹಣಾ ಸೌಲಭ್ಯವಾಗಿದೆ. ಈ ಸ್ಥಳಕ್ಕೆ ಹೋಗುವ ರಸ್ತೆ ತುಂಬಾ ಚೆನ್ನಾಗಿದೆ. ಸಣ್ಣ ಕೊಳದಲ್ಲಿ ಈಜಬಹುದು ಮತ್ತು ವಿಶ್ರಾಂತಿ ಪಡೆಯಬಹುದು. ತುಂಬಾ ಶಾಂತ ಮತ್ತು ಆಹ್ಲಾದಕರ ಸ್ಥಳ. ಒಟ್ಟಾರೆಯಾಗಿ ಒಂದು ದಿನದ ವಿಹಾರಕ್ಕೆ ಮತ್ತು ಹೇಮಾವತಿ ನದಿ ಹಿನ್ನೀರಿನ ಮೇಲೆ ಆನಂದಿಸಲು ಸೂಕ್ತವಾಗಿದೆ.

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು