ಶ್ರೀ ವಿಜಯ ದುರ್ಗಾ ಕ್ಷೇತ್ರವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಆಲೂರ್ ತಾಲೂಕಿನಲ್ಲಿ ಇರುವ ಒಂದು ಸುಂದರ ಹಾಗು ಪ್ರಸಿದ್ಧ ದೇವಾಲಯವಾಗಿದೆ. ಮೂರೂ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಉಡಸಲಮ್ಮ ಮತ್ತು ಮಸ್ತಲಮ್ಮ ದೇವಿಯರ ಪುನಾರ ಜೀವನಗೊಂಡ ವಿನೂತನ ದೇವಾಲಯಗಳ ಸಮುಚ್ಛಯವೇ ಈ ವಿಜಯ ದುರ್ಗಾ ಕ್ಷೇತ್ರಗಾಗಿ ರೂಪಗೊಂಡಿದೆ.
ಶ್ರೀ ವಿಜಯ ದುರ್ಗಾ ಕ್ಷೇತ್ರವು ಬೆಂಗಳೂರಿನಿಂದ ಸುಮಾರು 196 ಕಿ.ಮೀ ಮತ್ತು ಹಾಸನ ನಗರದಿಂದ 15 ಕಿ.ಮೀ ದೂರದಲ್ಲಿದೆ. ಹಾಗೂ ಆಲೂರ್ ತಾಲೂಕಿನಿಂದ 02 ಕಿ.ಮೀ ಮತ್ತು ಹಾಸನ ರೈಲ್ವೆ ನಿಲ್ದಾಣದಿಂದ 17 ಕಿ.ಮೀ ದೂರದಲ್ಲಿದೆ.
ಈ ಕ್ಷೇತ್ರವು ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 1:30 ರವರೆಗೆ ಮತ್ತು ಸಂಜೆ 4:00 ಗಂಟೆಗೆ 7:30 ರವರೆಗೆ ತೆರೆಯುತ್ತದೆ.
ದೇವಿಮಹಾತ್‌ಮಾಯದ ಪ್ರಕಾರ ದೈವಿ ಸ್ವರೂಪಕಾದ ಅಮ್ಮನಿಗೆ ಒಂಬತ್ತು ಹೆಸರುಗಳು – ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಗಂಟಾ, ಕುಷ್ಕಂಡ, ಸ್ಲಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಯಜ್ಞ ಮಂಟಪದ ಹೊರಗೆ ಪ್ರದಕ್ಷಿಣೆ ಹಾಕಿ ದೇವಿಯ ನವ ರೂಪಗಳ ದರ್ಶನ ಪಡೆಯಬಹುದು. ದುರ್ಗೆಯು ದೇಹ, ಮನಸ್ಸು ಮತ್ತು ಆತ್ಮದ ಎಲ್ಲಾ ಶಕ್ತಿಗಳ ಸಂಯೋಗದ ಪ್ರತೀಕವಾಗಿದ್ದಾಳೆ. ಈ ಶಕ್ತಿಯಿಂದ ಕೆಟ್ಟ ಗುಣಗಳು ಮತ್ತು ಕೆಟ್ಟ ಹವ್ಯಾಸಗಳು ನಾಶವಾಗುತ್ತವೆ. ನವದುರ್ಗೆಯಕ ದರ್ಶನದಿಂದ ಹಾಗು ದೈವಿ ಸ್ವರೂಪಳಾದ ದೇವಿಯ ನವ ರೂಪದ ಬಗ್ಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವುದರಿಂದ ಕೆಟ್ಟ ಶಕ್ತಿಗಳು ನಿರ್ಮೂಲನಗೊಂಡು, ಆತ್ಮವು ಶುದ್ಧವಾಗುತ್ತದೆ.
ಭೇಟಿ ನೀಡಿ
ಭೇಟಿ ನೀಡಿ