ಶ್ರೀ ವಿಜಯದುರ್ಗಾ ಕ್ಷೇತ್ರ

ಶ್ರೀ ವಿಜಯ ದುರ್ಗಾ ಕ್ಷೇತ್ರವು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿ ಇರುವ ಒಂದು ಸುಂದರ ಹಾಗೂ ಪ್ರಸಿದ್ಧ ದೇವಾಲಯವಾಗಿದೆ. ಮೂರೂ ಶತಮಾನಗಳ ಇತಿಹಾಸ ಹೊಂದಿರುವ ಶ್ರೀ ಉಡಸಲಮ್ಮ ಮತ್ತು ಮಸ್ತಲಮ್ಮ ದೇವಿಯರ ಪುನರುಜ್ಜೀವನಗೊಂಡ ವಿನೂತನ ದೇವಾಲಯಗಳ ಸಮೂಹವೇ ವಿಜಯ ದುರ್ಗಾ ಕ್ಷೇತ್ರವಾಗಿ ರೂಪಗೊಂಡಿದೆ.

ಶ್ರೀ ವಿಜಯದುರ್ಗಾ ಕ್ಷೇತ್ರ ದೂರಗಳು

  • ಬೆಂಗಳೂರು – 195 ಕಿ.ಮೀ
  • ಹಾಸನ – 16 ಕಿ.ಮೀ
  • ಆಲೂರು – 2 ಕಿ.ಮೀ
  • ಆಲೂರು ರೈಲ್ವೆ ನಿಲ್ದಾಣ – 3 ಕಿ.ಮೀ
  • ಹಾಸನ ರೈಲ್ವೆ ನಿಲ್ದಾಣ – 17 ಕಿ.ಮೀ

ಈ ಕ್ಷೇತ್ರವು ಬೆಳಿಗ್ಗೆ 7:30ರಿಂದ ಮಧ್ಯಾಹ್ನ 1:30ರವರೆಗೆ ಮತ್ತು ಸಂಜೆ 4:00ರಿಂದ 7:30ರವರೆಗೆ ತೆರೆದಿರುತ್ತದೆ.

ದೇವಿ ಮಹಾತ್ಮ್ಯದ ಪ್ರಕಾರ ದೈವೀಸ್ವರೂಪಳಾದ ಅಮ್ಮನಿಗೆ ಒಂಬತ್ತು ಹೆಸರುಗಳು — ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕುಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿ. ಯಜ್ಞಮಂಟಪದ ಹೊರಗೆ ಪ್ರದಕ್ಷಿಣೆ ಹಾಕಿ ದೇವಿಯ ನವರೂಪಗಳ ದರ್ಶನ ಪಡೆಯಬಹುದು.

ದುರ್ಗೆಯು ದೇಹ, ಮನಸ್ಸು ಮತ್ತು ಆತ್ಮದ ಎಲ್ಲಾ ಶಕ್ತಿಗಳ ಸಂಯೋಗದ ಪ್ರತೀಕವಾಗಿದ್ದಾಳೆ. ಈ ಶಕ್ತಿಯಿಂದ ಕೆಟ್ಟ ಗುಣಗಳು ಮತ್ತು ಕೆಟ್ಟ ಹವ್ಯಾಸಗಳು ನಾಶವಾಗುತ್ತವೆ. ನವದುರ್ಗೆಯ ದರ್ಶನದಿಂದ ಮತ್ತು ದೈವೀ ಸ್ವರೂಪಳಾದ ದೇವಿಯ ನವರೂಪಗಳಿಗೆ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುವುದರಿಂದ ಕೆಟ್ಟ ಶಕ್ತಿಗಳು ನಿರ್ಮೂಲಗೊಂಡು, ಆತ್ಮವು ಶುದ್ಧವಾಗುತ್ತದೆ.

ಭೇಟಿ ನೀಡಿ
ಆಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section