ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ರಂಗಸ್ಥಳ

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ರಂಗಸ್ಥಳವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ದಿಣ್ಣೆಹೊಸಹಳ್ಳಿ ಗ್ರಾಮದಲ್ಲಿದೆ. ಇದು ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ, ಈ ಸುಂದರವಾದ ದೇವಾಲಯ ದೈವಿಕ ಮೌಲ್ಯಗಳನ್ನು ಹೊಂದಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವು ಬೆಂಗಳೂರಿನಿಂದ ಸುಮಾರು 67 ಕಿ.ಮೀ ಮತ್ತು ಚಿಕ್ಕಬಳ್ಳಾಪುರ ನಗರದಿಂದ ಸುಮಾರು 05 ಕಿ.ಮೀ ದೂರದಲ್ಲಿದೆ. ಹಾಗೂ ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣದಿಂದ 06 ಕಿ.ಮೀ ದೂರದಲ್ಲಿದೆ.

ಚಿಕ್ಕದಾದರೂ ಐತಿಹಾಸಿಕ ದೇವಾಲಯ. ದಂತಕಥೆಗಳ ಪ್ರಕಾರ ವಿಭೀಷಣನು ಅಯೋಧ್ಯೆಯಲ್ಲಿ ಭಗವಾನ್ ರಾಮನ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗವಹಿಸಿದಾಗ, ಅವನಿಗೆ ಬಿದಿರಿನ ಬುಟ್ಟಿಯಲ್ಲಿ ಭಗವಾನ್ ರಂಗನಾಥನ ವಿಗ್ರಹವನ್ನು ನೀಡಲಾಯಿತು. ಈ ಘಟನೆಯ ಸ್ಮರಣಾರ್ಥ ಸಪ್ತಋಷಿಗಳು ರಂಗಸ್ಥಳದಲ್ಲಿ ಶಾಲಿಗ್ರಾಮದಿಂದ ಮಾಡಿದ ಇದೇ ರೀತಿಯ ವಿಗ್ರಹವನ್ನು ಸ್ಥಾಪಿಸಿದರು. ಈ ದೇವಾಲಯದ ಗರ್ಭಗ್ರಹವನ್ನು ಬಿದಿರಿನ ಬುಟ್ಟಿಯಂತೆ ನಿರ್ಮಿಸಲಾಗಿದೆ.

ಭೇಟಿ ನೀಡಿ
ಚಿಕ್ಕಬಳ್ಳಾಪುರ ತಾಲೂಕು ಇತರೆ ಪ್ರವಾಸಿ ಸ್ಥಳಗಳು


ಭೇಟಿ ನೀಡಿ
ಚಿಕ್ಕಬಳ್ಳಾಪುರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು