ಕೂಗೋ ಬಂಡೆ ಕಟ್ಟೆ

ಕೂಗೋ ಬಂಡೆ ಕಟ್ಟೆಯು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಇರುವ ಸುಂದರ ಪ್ರವಾಸಿ ತಾಣವಾಗಿದೆ. ಬೆಟ್ಟಗಳ ನಡುವೆ ಅಡಗಿರುವ ಈ ಸ್ಥಳವು ಪ್ರಕೃತಿ ಸೌಂದರ್ಯದಿಂದ ಕೂಡಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸುತ್ತಮುತ್ತಲಿನ ಬಂಡೆಗಳು, ಹಸಿರು ಪರಿಸರ ಮತ್ತು ಶಾಂತ ವಾತಾವರಣವು ಪ್ರಕೃತಿ ಪ್ರಿಯರಿಗೆ ಮನಸಾರೆ ಆನಂದ ನೀಡುತ್ತದೆ.

ಈ ಸ್ಥಳವು 204 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 06 ಕಿ.ಮೀ ದೂರದಲ್ಲಿದೆ. ಹಾಗೂ ಮೊಳಕಾಲ್ಮೂರು ನಗರದಿಂದ 09 ಕಿ.ಮೀ ಮತ್ತು ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 09 ಕಿ.ಮೀ ದೂರದಲ್ಲಿದೆ.

ಹಿಮಧಗಿರಿ ಬೆಟ್ಟಕ್ಕೆ ಏರುವ ಮೊದಲು, ಪ್ರವಾಸಿಗರನ್ನು ಸ್ವಾಗತಿಸುವಂತೆ ಒಂದು ಚಿಕ್ಕ ಹನುಮನ ದೇವಾಲಯ ಇದೆ. ಸ್ವಲ್ಪ ಮೇಲಕ್ಕೆ ಏರಿದಾಗ, ಸುತ್ತಮುತ್ತಲಿನ ದೊಡ್ಡ ಬಂಡೆಗಳ ಮಧ್ಯೆ ಒಂದು ಸುಂದರ ಕೆರೆ ಕಾಣಸಿಗುತ್ತದೆ. ಈ ಕೆರೆ ಅತ್ಯಂತ ಸ್ವಚ್ಛವಾಗಿದ್ದು, ಸಾಕಷ್ಟು ನೀರನ್ನು ಹೊಂದಿರುವುದರಿಂದ ದೃಶ್ಯ ಮನಮುಟ್ಟುವಂತಿರುತ್ತದೆ.

ಕೆರೆಯ ಸುತ್ತಲಿನ ಎತ್ತರದ ಬೆಟ್ಟಗಳನ್ನು ಹತ್ತಿ ಮುಂದೆ ಹೋಗಬಹುದಾಗಿದೆ. ಇಡೀ ಬೆಟ್ಟಶ್ರೇಣಿಯು ಕಲ್ಲಿನಿಂದ ಕೂಡಿದ್ದು, ವಿವಿಧ ಆಕಾರ ಮತ್ತು ಗಾತ್ರದ ಬಂಡೆಗಳು ಪ್ರವಾಸಿಗರ ಗಮನ ಸೆಳೆಯುತ್ತವೆ. ಪ್ರಕೃತಿ ಸೌಂದರ್ಯದ ಮಧ್ಯೆ ಇರುವ ಈ ಸ್ಥಳವು ಮನಸ್ಸಿಗೆ ಆನಂದ ಮತ್ತು ಶಾಂತಿಯನ್ನು ನೀಡುತ್ತದೆ.

ಬೆಟ್ಟದ ಮೇಲಕ್ಕೆ ಏರುವ ಮಾರ್ಗವು ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಆದ್ದರಿಂದ ಸ್ಥಳೀಯರಿಂದ ಮಾರ್ಗದರ್ಶನವನ್ನು ಕೇಳುವುದು ಉತ್ತಮ. ಹೀಗೆ ಮಾಡಿದರೆ ಸುರಕ್ಷಿತವಾಗಿ ಮತ್ತು ಸುಲಭವಾಗಿ ತಲುಪಬಹುದು.

ಭೇಟಿ ನೀಡಿ
ಚಿತ್ರದುರ್ಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section