ಹಲುವಾಗಿಲು ಜಲಪಾತ ಇದು ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಇದೆ. ಇದು ಒಂದು ಚಿಕ್ಕ ಚೆಕ್ ಡ್ಯಾಂ ಆಗಿದ್ದು, ಈ ಸ್ಥಳವು ಹಾಸನ ಮಂಗಳೂರು ಹೆದ್ದಾರಿಯಿಂದ ಕೇವಲ 05 ನಿಮಿಷಗಳ ಡ್ರೈವ್ ಆಗಿದೆ. ಅನ್ವೇಷಿಸಲು ಅದ್ಭುತವಾದ ಸ್ಥಳ ಮತ್ತು ಸುಂದರವಾದ ನೀರಿನ ಹರಿವು, ಮನಸ್ಸಿಗೆ ಒಂದು ಸಂತೋಷದ ಅನುಭವ ನೀಡುವ ಜಲಪಾತವಾಗಿದೆ.
ಹಲುವಾಗಿಲು ಜಲಪಾತವು ಬೆಂಗಳೂರಿನಿಂದ 240.7 ಕಿ.ಮೀ ಮತ್ತು ಹಾಸನದಿಂದ 8.2 ಕಿ.ಮೀ ದೂರದಲ್ಲಿದೆ. ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 9.9 ಕಿಲೋಮೀಟರ್ ದೂರದಲ್ಲಿದೆ.
ಹಾಸನದ ಹಾಲುವಾಗಿಲು ಜಲಪಾತ ಭಾರೀ ಗಮನ ಸೆಳೆಯುತ್ತಿದೆ. ಧುಮ್ಮಿಕ್ಕಿ ಹರಿಯುವ ಜಲಪಾತಗಳ ನಡುವೆ ಇದು ಕೊಂಚ ವಿಭಿನ್ನವಾದ್ರೂ, ನೋಡಲು ಮಾತ್ರ ಅತ್ಯಂತ ಆಕರ್ಷಣೀಯವಾಗಿದೆ. ತನ್ನ ಸೌಂದರ್ಯದಿಂದಲೇ ಮೋಡಿ ಮಾಡುವ ಈ ಹಾಲುವಾಗಿಲು ಫಾಲ್ಸ್ (Haluvagilu Falls) ಹಾಲು ನೊರೆಯಂತೆ ಧುಮ್ಮಿಕ್ಕುವುದು ವಿಶೇಷ.
ಭೇಟಿ ನೀಡಿ