ಕೊರವಂಗಲ ಅವಳಿ ದೇವಾಲಯಗಳು

ಕೋರವಂಗಲದ ನಾಗೇಶ್ವರ ಮತ್ತು ಗೋವಿಂದೇಶ್ವರ ದೇವಾಲಯಗಳು ಅವಳಿ ದೇವಾಲಯಗಳಾಗಿವೆ. ಈ ದೇವಾಲಯವು ಕರ್ನಾಟಕದ ರಾಜ್ಯದ ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿರುವ ಹಿಂದೂ ದೇವಾಲಯವಾಗಿದೆ. ಕೋರವಂಗಲದಲ್ಲಿರುವ ಪುರಾತನ ನಾಗೇಶ್ವರ ಮತ್ತು ಗೋವಿಂದೇಶ್ವರ ಅವಳಿ ದೇವಾಲಯವು ಕರ್ನಾಟಕದ ಶ್ರೀಮಂತ ಪರಂಪರೆಗೆ ಒಂದು ಆಕರ್ಷಕ ಸಾಕ್ಷಿಯಾಗಿದೆ.

ಈ ದೇವಾಲಯವು ಬೆಂಗಳೂರಿನಿಂದ ಸುಮಾರು 235.1 ಕಿ.ಮೀ ಮತ್ತು ಹಾಸನ ನಗರದಿಂದ ಸುಮಾರು 11.8 ಕಿ.ಮೀ ದೂರದಲ್ಲಿದೆ. ಹಾಗೂ ಹಾಸನ ರೈಲ್ವೆ ನಿಲ್ದಾಣದಿಂದ 12 ಕಿ.ಮೀ ದೂರದಲ್ಲಿದೆ.

ನಾಗೇಶ್ವರ ದೇವಸ್ಥಾನ

ನಾಗೇಶ್ವರ ದೇವಾಲಯವು ಅಲಂಕೃತವಾಗಿದ್ದರೂ ಗಾತ್ರದಲ್ಲಿ ಚಿಕ್ಕದಾಗಿದೆ ಮತ್ತು ಬೂಜೇಶ್ವರ (ಕೊರವಂಗಲ ಬುಚೇಶ್ವರ ಸ್ವಾಮಿ ದೇವಸ್ಥಾನವು ಈ ದೇವಾಲಯದಿಂದ ಕೊರವಂಗಲದಲ್ಲಿ ಇರುವ ಮತ್ತೊಂದು 12 ನೇ ಶತಮಾನದ ಹಿಂದೂ ದೇವಾಲಯವಾಗಿದೆ) ದೇವಸ್ಥಾನಕ್ಕಿಂತ ಹೆಚ್ಚು ಸರಳವಾಗಿದೆ. ಈ ದೇವಾಲಯವನ್ನು ಹೊಯ್ಸಳರ ದೊರೆ 1ನೇ ನರಸಿಂಹನ ಆಳ್ವಿಕೆಯಲ್ಲಿ ನಕೀಮಯ್ಯ ನಿರ್ಮಿಸಿದನು. ಈ ದೇವಾಲಯವು ಗರ್ಭಗೃಹ, ತರದ ಸುಖನಾಸಿ, ನವರಂಗ ಮತ್ತು ಮುಖಮಂಟವವನ್ನು ಹೊಂದಿದೆ. ನವರಂಗವು ಚೌಕಾಕಾರದ ಜಾಲಾಂದ್ರವನ್ನು ಮತ್ತು 24 ಗಂಟೆಯಾಕಾರದ ಕಂಬಗಳನ್ನು ಹೊಂದಿದೆ. ನವರಂಗವು ಉತ್ತಮವಾದ ದ್ವಾರ ಬಾಗಿಲನ್ನು ಹೊಂದಿದ್ದು, ನವರಂಗದ ವಿತಾನದಲ್ಲಿ (ಮೇಲ್ಬಾವಣಿ) ಮಧ್ಯ ನಟರಾಜನ ಶಿಲ್ಪ ಅದರ ಸುತ್ತಲೂ ಸಂಗೀತಗಾರರ ಶಿಲ್ಪಗಳನ್ನು ಕೆತ್ತಲಾಗಿದೆ. ಮುಖಮಂಟಪದ ವಿತಾನವು ಭವ್ಯವಾದ ಕೆತ್ತನೆಯನ್ನು ಹೊಂದಿದೆ. ಒಂದು ಅಥವಾ ಎರಡು ಅರ್ಧಗ೦ಬಗಳನ್ನು ತೋರಿಸುವ ಹೊರಗಿನ ಗೋಡೆಗಳು ಗೋಪುರಗಳಿಂದ ಆಕ್ರಮಿಸಲ್ಪಟ್ಟಿವೆ. ಈ ದೇವಾಲಯದ ಉಲ್ಲೇಖವಿರುವ ಒಂದು ಶಾಸನವಿದೆ.

ಗೋವಿಂದೇಶ್ವರ ದೇವಸ್ಥಾನ

ಹೊಯ್ಸಳ ದೊರೆ ನರಸಿಂಹನ ಮಂತ್ರಿಯಾದ ಗೋವಿಂದಯ್ಯನಿಂದ ಕ್ತಿ.ಶ ಸುಮಾರು 1160 ರಲ್ಲಿ ನಿರ್ಮಿಸಲ್ಪಟ್ಟ ಗೋವಿಂದೇಶ್ವರ ದೇವಾಲಯವು ಗರ್ಭಗೃಹ, ಸುಖನಾಸಿ ಹಾಗೂ ನವರಂಗವನ್ನು ಹೊಂದಿದೆ. ಈ ದೇವಾಲಯವು ಉತ್ತರ ಮತ್ತು ದಕ್ಷಿಣ ಎರಡು ಕಡೆಯಿಂದ ಪ್ರವೇಶದ್ವಾರಗಳನ್ನು ಹೊಂದಿದ್ದು ಮುಖಮಂಟಪದ ಮೂಲಕ ನವರಂಗಕ್ಕೆ ಪ್ರವೇಶ ಪಡೆಯುತ್ತದೆ.

ಗೋವಿಂದೇಶ್ವರ ದೇಗುಲವು ಅಷ್ಟಭುಜಾಕೃತಿಯು ಪಕ್ಕೆಲುಬುಗಳನ್ನು ಹೊಂದಿರುವ ಬೀಳು ಬಿದ್ದಿರುವ ಗುಮ್ಮಟವನ್ನು ಹೊಂದಿದೆ. ಇಲ್ಲಿನ ಆಲಂಕೃತವಾದ ಹೊರಗಿನ ಗೋಡೆಗಳು ಒಂದು ಅಥವಾ ಎರಡು ಅರೆಕಂಬಗಳ ಮೇಲೆ ವಿನ್ಯಾಸಗೊಳಿಸಲಾದ ಗೋಪುರಗಳನ್ನು ಹೊಂದಿರುತ್ತದೆ. ಕ್ತಿ.ಶ 1180 ರಲ್ಲಿ ನಿರ್ಮಿಸಲಾದ ಮುಖಮಂಟಪದಲ್ಲಿ ಮಹಿಷಮರ್ಧಿನಿಯ ಸುತ್ತಲೂ ಅಷ್ಟದಿಕ್ಷಾದಕರನ್ನು ಹೊಂದಿರುವ ಅಲಂಕೃತ ಛಾವಣಿಯನ್ನು ಕಾಣಬಹುದು. ಈ ದೇವಾಲಯದ ಉಲ್ಲೇಖದಿರುವ ಮೂರು ಶಾಸನಗಳು ಈ ದೇವಾಲಯದಲ್ಲಿವೆ.

ಭೇಟಿ ನೀಡಿ
ಹಾಸನ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾಸನ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section