ಕಾಗಿನೆಲೆ ಪಾರ್ಕ್

ಕಾಗಿನೆಲೆ ಪಾರ್ಕ್ ಇದು ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಇದೆ. ಇದು ಕನಕದಾಸರ ನೆನಪಿಗಾಗಿ ನಿರ್ಮಿಸಿದ ಪಾರ್ಕ್ ಆಗಿದೆ. ಈ ಪಾರ್ಕ್ ನ ಹೆಸರು ಕನಕ ಲೋಕ. ಕಾಗಿನೆಲೆ ಪಾರ್ಕ್ ಕನಕದಾಸರ ದೇವಸ್ಥಾನದಿಂದ 02 ಕಿಮೀ ದೂರದಲ್ಲಿರುವ ಕಾಗಿನೆಲೆ ಗ್ರಾಮದಲ್ಲಿದೆ.

ಈ ಸ್ಥಳವು ಬೆಂಗಳೂರಿನಿಂದ ಸುಮಾರು 337 ಕಿ.ಮೀ ಮತ್ತು ಹುಬ್ಬಳಿಯಿಂದ 91 ಕಿ.ಮೀ ದೂರದಲ್ಲಿದೆ. ಹಾಗೂ ಹಾವೇರಿ ನಗರದಿಂದ 19 ಕಿ.ಮೀ ಮತ್ತು ಹಾವೇರಿ ನಗರ ರೈಲ್ವೆ ನಿಲ್ದಾಣದಿಂದ 21 ಕಿ.ಮೀ ದೂರದಲ್ಲಿದೆ.

ಕನಕದಾಸರ ಜೀವನ ಘಟನೆಗಳನ್ನು ಆಧರಿಸಿದ ಉದ್ಯಾನವನ ಆಗಿದ್ದು, ಇದು ಅವರು ಹೆಚ್ಚಿನ ಕೆಲಸವನ್ನು ಮಾಡಿದ ಸ್ಥಳದಲ್ಲಿ ಮತ್ತು ಅವರ ಜೀವನದ ಕೊನೆಯ ದಿನಗಳಲ್ಲಿ ಅಲ್ಲಿಯೇ ಇದೆ. ಅವರ ಕೆಲವು ಪ್ರಸಿದ್ಧ ಜೀವನದ ಘಟನೆಗಳನ್ನು ನಾವು ಶಿಲ್ಪಗಳಲ್ಲಿ ನೋಡಬಹುದು. ಮಕ್ಕಳಿಗಾಗಿ ಉತ್ತಮವಾಗಿ ನಿರ್ವಹಿಸಲಾದ ಉದ್ಯಾನ ಮತ್ತು ಆಟದ ಪ್ರದೇಶ.

ಭೇಟಿ ನೀಡಿ
ಬ್ಯಾಡಗಿ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಹಾವೇರಿ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section