ಅಮ್ಮೇರಹಳ್ಳಿ ಕೆರೆಯು ಕರ್ನಾಟಕ ರಾಜ್ಯದ ಕೋಲಾರದ ಚೌಡದೇನಹಳ್ಳಿ ಎಂಬ ಸ್ಥಳದಲ್ಲಿ ಮತ್ತು ರಾಷ್ಟ್ರೀಯ ಹೆದ್ದಾರಿ 75 (ಬೆಂಗಳೂರು ಮತ್ತು ತಿರುಪತಿ ಹೆದ್ದಾರಿ) ಯಲ್ಲಿ ಇರುವ ಕೆರೆಯಾಗಿದೆ. ಇದು 400 ಎಕರೆಗೂ ಹೆಚ್ಚು ವಿಸ್ತೀರ್ಣ ಹೊಂದಿರುವ ದೊಡ್ಡ ಕೆರೆಯಾಗಿದೆ.
ಈ ಕೆರೆಯು ಬೆಂಗಳೂರಿಂದ 68 ಕಿ.ಮೀ ಮತ್ತು ಕೋಲಾರದಿಂದ 06 ಕಿ.ಮೀ ದೂರದಲ್ಲಿದೆ. ಹಾಗೂ ಕೋಲಾರ ರೈಲ್ವೆ ನಿಲ್ದಾಣದಿಂದ 07 ಕಿ.ಮೀ ದೂರದಲ್ಲಿದೆ.
ಈ ಕೆರೆಯ ನೋಟ ಅದ್ಭುತವಾಗಿದೆ, ಇಡೀ ಸ್ಥಳವು ಶಾಂತವಾಗಿದೆ ಮತ್ತು ಹವಾಮಾನವು ತಂಪಾಗಿದೆ. ಮರಗಳು ಮತ್ತು ಬೆಟ್ಟಗಳಿಂದ ಆವೃತವಾಗಿರುವ ಪ್ರದೇಶದಲ್ಲಿ ಈ ಕೆರೆಯು ಇದ್ದು, ಇದು ತುಂಬಾ ಅದ್ಭುತವಾದ ಸ್ಥಳವಾಗಿದೆ ಮತ್ತು ಕುಟುಂಬ ಪ್ರವಾಸಕ್ಕೆ ಅದ್ಭುತವಾದ ಸ್ಥಳವಾಗಿದೆ.
ಭೇಟಿ ನೀಡಿ




