ಚಿಕ್ಕ ತಿರುಪತಿ

ದಕ್ಷಿಣ ಭಾರತದಲ್ಲಿರುವ ಇರುವ ಏಳು ತಿರುಪತಿಗಳಲ್ಲಿ ಕೋಲಾರದಲ್ಲಿರುವ ಚಿಕ್ಕ ತಿರುಪತಿಯು ಪ್ರಮುಖದಾಗಿದೆ. ಚಿಕ್ಕ ತಿರುಪತಿಯು ಧಾರ್ಮಿಕ ಮಹತ್ವವಿರುವ ಸ್ಥಳವಾಗಿದೆ. ಈ ದೇವಾಲಯವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಚಿಕ್ಕ ತಿರುಪತಿ ಹೋಬಳಿಯಲ್ಲಿ ಇರುವ ಪ್ರಮುಖ ಹಿಂದೂ ದೇವಾಲಯವಾಗಿದೆ.

ಈ ದೇವಾಲಯವು ದ್ರಾವಿಡ ಶೈಲಿಯ ಶಿಲ್ಪಕಲೆಯಲ್ಲಿ ನಿರ್ಮಿಸಲಾಗಿದ್ದು, ಆಂಧ್ರಪ್ರದೇಶದ ತಿರುಪತಿಯ ವೇಂಕಟೇಶ್ವರ ದೇವಾಲಯದಂತೆ ಅನ್ಯೋನ್ಯತೆ ಹೊಂದಿದೆ ಎಂದು ಭಕ್ತರು ನಂಬುತ್ತಾರೆ. ಇಲ್ಲಿ ವಿಷ್ಣುವನ್ನು ವೇಂಕಟೇಶ್ವರನಾಗಿ ಮತ್ತು ಅವರ ಪತ್ನಿ ಲಕ್ಷ್ಮಿಯನ್ನು ಅಲಮೆಲುಮಂಗಮ್ಮೆಯಾಗಿ ಪೂಜಿಸಲಾಗುತ್ತದೆ.

ಈ ದೇವಾಲಯವು ಬೆಂಗಳೂರಿಂದ 40 ಕಿ.ಮೀ ಮತ್ತು ಕೋಲಾರದಿಂದ 42 ಕಿ.ಮೀ ದೂರದಲ್ಲಿದೆ. ಹಾಗೂ ಮಾಲೂರಿನಿಂದ 16 ಕಿ.ಮೀ ದೂರದಲ್ಲಿದೆ.

ಇತಿಹಾಸ

ದ್ವಾಪರ ಯುಗದಲ್ಲಿ ರಾಜಮಹಾರಾಜರುಗಳು ಮತ್ತು ಋಷಿಮುನಿಗಳು ಮಾಡುತ್ತಿದ್ದ ಯಜ್ಞ ಯಾಗಾದಿಗಳಲ್ಲಿ ಅರ್ಪಿಸುತ್ತಿದ್ದ ಹವಿಸ್ಸಿನ ರೂಪದಲ್ಲಿ ಅರ್ಪಿಸಿದ ತುಪ್ಪವನ್ನು ಸೇವಿಸಿ ಅಗ್ನಿ ದೇವರಿಗೆ ಉದರ ಬೇನೆ ಉಂಟಾಗುತ್ತದೆ. ಆಗ ದೇವಲೋಕದ ವೈದ್ಯರಾದ ಅಶ್ವಿನಿ ಕುಮಾರರು ಔಷಧಿ ಸಸ್ಯಗಳಿಂದ ಸಮೃದ್ಧವಾದ ಖಾಂಡವ ವನವನ್ನು ಭಕ್ಷಿಸಿದರೆ ಉದರ ಬೇನೆ ನಿವಾರಣೆಯಾಗುತ್ತೆ ಎಂದು ಆತನಿಗೆ ತಿಳಿಸುತ್ತಾರೆ. ಆಗ ಅಗ್ನಿ ದೇವರು ಅರ್ಜುನ ಹಾಗೂ ಶ್ರೀಕೃಷ್ಣನ ಬೆಂಗಾವಲಾಗಿ ನಿಲ್ಲಿಸಿಕೊಂಡು ಖಾಂಡವ ವನವನ್ನು ದಹಿಸಿತಾನೆ.

ಈ ಸಂದರ್ಭದಲ್ಲಿ ವನವನ್ನು ದಹಿಸುವಾಗ ತಕ್ಷಕ ಎಂಬ ಸರ್ಪವು ಬೆಂಕಿಗೆ ಸಿಲುಕಿ ಮೈಯೆಲ್ಲಾ ಸುಟ್ಟುಕೊಂಡು, ಅಗ್ನಿಗೆ ತೇಜಹೀನನಾಗುವಂತೆ ಶಾಪ ಕೊಡು ಕೊಡುತ್ತದೆ. ತಕ್ಷಕನ ಶಾಪದ ಫಲವಾಗಿ ಅಗ್ನಿಯು ತೇಜಹೀನನಾಗುತ್ತಾನೆ. ಲೋಕದಲ್ಲಿ ಯಜ್ಞ ಯಾಗಾದಿಗಳು ನಿಂತು ಹೋಗುತ್ತವೆ. ದೇವದಿ ದೇವತೆಗಳು ತಮ್ಮ ಪಾಲಿನ ಹವಿರಬಾಗವೂ ಸಿಗದೆ ಪರಿತಪಿಸುತ್ತಾರೆ.

ಕೊನೆಗೆ ಅಗ್ನಿಯು ಮಹಾವಿಷ್ಣುವನ್ನು ಕುರಿತು ಘೋರ ತಪಸ್ಸನ್ನು ಆಚರಿಸುತ್ತಾನೆ. ಆಗ ಅಗ್ನಿದೇವರ ತಪಸ್ಸಿಗೆ ಮೆಚ್ಚಿ ಮಹಾವಿಷ್ಣು ಪ್ರಸನ್ನ ವೆಂಕಟೇಶ್ವರನ ರೂಪದಲ್ಲಿ ಪ್ರತ್ಯಕ್ಷರಾಗಿ ಅಗ್ನಿಯ ಶಾಪ ವಿಮೋಚನೆಯನ್ನು ಮಾಡುತ್ತಾರೆ. ವಿಷ್ಣುವಿಗೆ ಕೃತಜ್ಞತೆಯನ್ನು ಸಲ್ಲಿಸುವ ಸಲುವಾಗಿ ಅಗ್ನಿಯು ಈ ಸ್ಥಳದಲ್ಲಿ ಪ್ರಸನ್ನ ವೆಂಕಟೇಶ್ವರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾನೆ. ಚೈತ್ರ ಮಾಸದ ಪುಬ್ಬಾ ನಕ್ಷತ್ರವಿರುವ ದಿನದಂದು ಅಗ್ನಿಗೆ ಅಭಯ ನೀಡಿದ ಶುಭದಿನದಂದು ಚಿಕ್ಕ ತಿರುಪತಿಯಲ್ಲಿ ಬ್ರಹ್ಮ ರಥೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಭೇಟಿ ನೀಡಿ
ಮಾಲೂರು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಕೋಲಾರ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section