ತಿಮ್ಮನಾಯಕನಹಳ್ಳಿ ಕೋಟೆಯು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ತಿಮ್ಮನಾಯಕನಹಳ್ಳಿ ಗ್ರಾಮದಲ್ಲಿ ಇರುವ ಒಂದು ಐತಿಹಾಸಿಕ ಮತ್ತು ಪುರಾತನ ಕೋಟೆಯಾಗಿದೆ. ಇದೊಂದು ಸರಿಯಾದ ಜೀರ್ಣೋದ್ಧಾರ ವಿಲ್ಲದೆ ಪಾಳು ಬಿದ್ದು ಹೋದ ಕೋಟೆಯಾಗಿದೆ. ಆದರೆ ಇದರ ಸುತ್ತಲಿನ ನೈಸರ್ಗಿಕ ನೋಟ ಮೈ ಮರೆಯುವಂತೆ ಮಾಡುತ್ತದೆ.
ಈ ಕೋಟೆಯು ಬೆಂಗಳೂರಿಂದ 68 ಕಿ.ಮೀ ಮತ್ತು ಕೋಲಾರದಿಂದ 27 ಕಿ.ಮೀ ದೂರದಲ್ಲಿದೆ. ಹಾಗೂ ಮಾಲೂರು ತಾಲೂಕಿನಿಂದ 17 ಕಿ.ಮೀ ದೂರದಲ್ಲಿದೆ.
ಈ ಕೋಟೆಯ ಪಕ್ಕದಲ್ಲಿ ಕೆರೆಯ ಇರುವ ಒಂದು ಶಾಸನದ ಪ್ರಕಾರ ಹಿಂದೆ ತಿಮ್ಮನಾಯಕನಹಳ್ಳಿಯನ್ನು ತಿಮ್ಮ ಸಮುದ್ರ ಎಂದು ಕರೆಯುತಿದ್ದರು. ಈ ಕೋಟೆಯು ಮಾಧ್ಯಮ ಗಾತ್ರದ ಕಲ್ಲುಗಳಿಂದ ನಿರ್ಮಿಸಿದ ಕೋಟೆಯಾಗಿದೆ. ಕೋಟೆಯು ಚೌಕಾಕಾರವಾಗಿದ್ದು, ಕೋಟೆಯ ನಾಲ್ಕು ಮೂಲೆಯಲ್ಲಿ ಬುರುಜುಗಳನ್ನು ನಿರ್ಮಿಸಲಾಗಿದೆ.
ಭೇಟಿ ನೀಡಿ





