ಸಿದ್ದರ ಬೆಟ್ಟವು ಕರ್ನಾಟಕ ರಾಜ್ಯದ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಸಿದ್ದರ ಬೆಟ್ಟ ಪ್ರಾಂತ್ಯದ ಒಂದು ಬೆಟ್ಟವಾಗಿದೆ. ಈ ಬೆಟ್ಟವು ತುಂಬಾ ಆಸಕ್ತಿದಾಯಕ ಚಾರಣಿಗರ, ಸಾಹಸಿಗಳ ಮತ್ತು ಗುಹೆಗಳ ಅನ್ವೇಷಣೆಯ ಮತ್ತು ಶ್ರೀ ಸಿದ್ದಲಿಂಗೇಶ್ವರ ದೇವರ ದೇಗುಲಕ್ಕಾಗಿ ಹೆಸರುವಾಸಿಯಾಗಿದೆ .
ಈ ಬೆಟ್ಟವು ಬೆಂಗಳೂರಿನಿಂದ ಸುಮಾರು 103 ಕಿ.ಮೀ ಮತ್ತು ತುಮಕೂರು ನಗರದಿಂದ 31ಕಿ.ಮೀ ದೂರದಲ್ಲಿದೆ. ಹಾಗು ಕೊರಟಗೆರೆಯಿಂದ 18 ಕಿ.ಮೀ ದೂರದಲ್ಲಿದೆ. ತುಮಕೂರು ಹತ್ತಿರದ ರೈಲ್ವೆ ನಿಲ್ದಾಣವಾಗಿದ್ದು ಕೇವಲ 32 ಕಿ.ಮೀ ದೂರದಲ್ಲಿದೆ.
ಈ ದೇವಾಲಯವು ಬೆಳ್ಳಿಗ್ಗೆ 7:30 ರಿಂದ ಸಂಜೆ 5:30ರ ವರೆಗೆ ತೆರೆದಿರುತ್ತದೆ.
ಕನ್ನಡದಲ್ಲಿ ಸಿದ್ದರ ಬೆಟ್ಟ ಎಂದರೆ “ಸಂತರ ಬೆಟ್ಟ” ಎಂದು ಕರೆಯುತ್ತಾರೆ. ಏಕೆಂದರೆ ಸಿದ್ದರ ಬೆಟ್ಟವು ಪ್ರಾಚೀನ ಕಾಲದಿಂದಲೂ ಶ್ರೀಮಂತ ಸಂತರ ಇತಿಹಾಸವನ್ನು ಹೊಂದಿದೆ. ಈ ಬೆಟ್ಟವು ಹಲವಾರು ಗುಹೆಗಳಿಗೆ ನೆಲೆಯಾಗಿದೆ. ಅನೇಕ ಹಿಂದೂ ಸಂತರು ಇಲ್ಲಿ ತಪಸ್ಸು ಮತ್ತು ಧ್ಯಾನವನ್ನು ಮಾಡುತಿದ್ದರು. ಈ ಬೆಟ್ಟವು 19 ನೇ ಶತಮಾನದಲ್ಲಿ ಪುರಾಣ ಪ್ರಸಿದ್ಧ ಸಂತ ಶ್ರೀ ಸಿದ್ದರ ಸ್ವಾಮಿಯವರು ಬೆಟ್ಟದ ಗುಹೆಯೊಳಗೆ ನೆಲೆಸಿದ್ದರು ಎಂದು ಹೇಳಲಾಗುವ ಪುರಾವೆಗಳಿವೆ.
ಆಧ್ಯಾತ್ಮಿಕ ಮತ್ತು ಪುರಾಣ ಪ್ರಸಿದ್ಧ ಸಂತ ಸಿದ್ದರ ಸ್ವಾಮಿ ಎಂಬ ಸಂತರು ಅದ್ಭುತವಾದ ಶಕ್ತಿಯನ್ನು ಹೊಂದಿದ್ದರೆoದು ಹೇಳಲಾಗುತ್ತದೆ ಮತ್ತು ಕಾಯಿಲೆಗಳನ್ನು ಗುಣಪಡಿಸುವ ಅನೇಕ ಅದ್ಭುತಗಳನ್ನು ಮಾಡುತಿದ್ದರು ಎಂದು ಹೇಳಲಾಗುತ್ತದೆ. ಸತ್ತವರನ್ನು ಮತ್ತೆ ಬದುಕಿಸಿದ ಪುರಾವೆಗಳಿವೆ .
ಬೆಟ್ಟಗಳು ಔಷಧೀಯ ಸಸ್ಯಗಳಿಗೆ ಬಹಳ ಹೆಸರುವಾಸಿಯಾಗಿದೆ ಮತ್ತು ಆದ್ದರಿಂದ ಇದನ್ನು ಸಾಂಪ್ರದಾಯಿಕ ಔಷಧದಲ್ಲಿ ಬಳಸುವ ಔಷಧೀಯ ಸಸ್ಯಗಳ ಕೇಂದ್ರವೆಂದು ಕರೆಯಲಾಗುತ್ತದೆ.
ಸಮುದ್ರ ನೀರಿನ ಮಟ್ಟದಿಂದ 1,700 ಅಡಿ ಎತ್ತರದಲ್ಲಿರುವ ಸಿದ್ದರ ಬೆಟ್ಟವು ಚಾರಣ ಸಾಹಸವನ್ನು ಮಾಡಲು ಅನುಕೂಲಕರವಾಗಿದೆ. ಟ್ರೆಕ್ಕಿಂಗ್ ಮಾರ್ಗವು 3-4 ಕಿ.ಮೀ. ಗಳಿಂದ ಕೂಡಿದ್ದು, ಚಾರಣವನ್ನು ಹತ್ತಲು ಗರಿಷ್ಠ 2 ಗಂಟೆ ಬೇಕಾಗುತ್ತದೆ.
ಭೇಟಿ ನೀಡಿ