1008 ಅನಂತನಾಥ ತೀರ್ಥಂಕರ ದಿಗಂಬರ್ ಜೈನ ಬಸದಿ

ಲಕ್ಷ್ಮೇಶ್ವರದಲ್ಲಿರುವ ಮತ್ತೊಂದು ಜೈನ ದೇವಾಲಯವೆಂದರೆ ಅನಂತನಾಥ ಬಸದಿ. ಈ ಬಸದಿಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಧ್ಯದಲ್ಲಿದೆ. ಇದನ್ನು ಕ್ರಿ.ಶ. 1250 ರಲ್ಲಿ ನಿರ್ಮಿಸಲಾಯಿತು, ಇದು ಈ ಬಸದಿ ಚಾಲುಕ್ಯ ಶೈಲಿಯ ವಾಸ್ತುಶಿಲ್ಪಕ್ಕೆ ಒಂದು ಉದಾಹರಣೆಯಾಗಿದೆ. 24 ತೀರ್ಥಂಕರರಲ್ಲಿ ಒಬ್ಬರಾದ ಅನಂತನಾಥನ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗಿದೆ.

ಲಕ್ಷ್ಮೇಶ್ವರದಲ್ಲಿ ಇರುವ 1008 ಅನಂತನಾಥ ತೀರ್ಥಂಕರ ದಿಗಂಬರ್ ಜೈನ ಬಸದಿಯು ಬೆಂಗಳೂರಿನಿಂದ 385 ಕಿ.ಮೀ ಮತ್ತು ಗದಗದಿಂದ 46 ಕಿ.ಮೀದೂರದಲ್ಲಿದೆ. ಹಾಗೂ ಲಕ್ಷ್ಮೇಶ್ವರ ದಿಂದ ಕೇವಲ 650 ಮೀ ಮತ್ತು ಗುಡಗೇರಿ ರೈಲ್ವೆ ನಿಲ್ದಾಣದಿಂದ 13 ಕಿ.ಮೀ ದೂರದಲ್ಲಿದೆ.

ಲಕ್ಷ್ಮೇಶ್ವರದಲ್ಲಿರುವ ಇರುವ ಪ್ರಾಚೀನ ಸ್ಮಾರಕವಾಗಿರುವ ಇದು, ಕಲ್ಯಾಣ ಚಾಲುಕ್ಯರ ಕಾಲದ ಬಸದಿ. ನಂತರ ವಿಜಯನಗರ ಅರಸರ ಕಾಲದಲ್ಲಿ ಜೈನ ಬಸದಿಯನ್ನು ವಿಸ್ತರಣೆ ಮಾಡಲಾಯಿತು. ಈ ದೇವಾಲಯವು ತ್ರಿಕೂಟ ಪದ್ಧತಿ ವ್ಯವಸ್ಥೆಯಲ್ಲಿ ಇದೆ. ಇಲ್ಲಿ ನಾಲ್ಕು ಗರ್ಭಗೃಹಗಳಲ್ಲಿ ಜೈನ ತೀರ್ಥಂಕರ ವಿಗ್ರಹಗಳು ಇದ್ದು, ತೀರ್ಥಂಕರ ಕೆಳಗಡೆ ಶಾಸನಗಳನ್ನು ಸಹ ಬರೆಯಲಾಗಿದೆ. ಈ ಬಸದಿಯು ರಾಜ್ಯ ಸರ್ಕಾರದ ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಅಧೀನಕ್ಕೆ ಒಳಪಟ್ಟಿದೆ.

ಭೇಟಿ ನೀಡಿ
ಲಕ್ಷ್ಮೇಶ್ವರ ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section