ನನ್ನೇಶ್ವರ ದೇವಸ್ಥಾನವು ಕರ್ನಾಟಕದ ರಾಜ್ಯದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿರುವ 11 ನೇ ಶತಮಾನದ ಹಿಂದೂ ದೇವಾಲಯವಾಗಿದೆ. ಇದು ಕಲ್ಯಾಣ ಚಾಲುಕ್ಯರ ಅತ್ಯಂತ ಪ್ರಾಚೀನ ಸಾಮ್ರಾಜ್ಯಶಾಹಿ ಶೈಲಿಯ ದೇವಾಲಯವಾಗಿದ್ದು, ಹಿಂದೂ ವಾಸ್ತುಶಿಲ್ಪದ ಉತ್ತರ ಭಾರತ ಮತ್ತು ದಕ್ಷಿಣ ಭಾರತೀಯ ರಾಜರ ಕಾಲಗಳಿಂದ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಈ ದೇವಾಲಯವು ಕಾಶಿವಿಶ್ವೇಶ್ವರ ದೇವಸ್ಥಾನದಕ್ಕೆ ಹತ್ತಿರದಲ್ಲಿದೆ.
ಈ ದೇವಸ್ಥಾನವು ಬೆಂಗಳೂರಿನಿಂದ 403 ಕಿ.ಮೀ ಮತ್ತು ಹುಬ್ಬಳ್ಳಿ ನಗರದಿಂದ 70 ಕಿ.ಮೀ ದೂರದಲ್ಲಿದೆ. ಹಾಗೂ ಗದಗ ನಗರದಿಂದ ರಸ್ತೆ ಮಾರ್ಗವಾಗಿ ಕೇವಲ 11 ಕಿ.ಮೀ ಮತ್ತು ಗದಗ ರೈಲ್ವೆ ನಿಲ್ದಾಣದಿಂದ 13 ಕಿಮೀ ದೂರದಲ್ಲಿದೆ.
ಈ ದೇವಾಲಯವು ಬೆಳ್ಳಿಗ್ಗೆ 08.00 ರಿಂದ ರಾತ್ರಿ 08.00 ರವರೆಗೆ ತೆರೆದಿರುತ್ತದೆ.
ನನ್ನೇಶ್ವರ ದೇವಾಲಯವು ದೊಡ್ಡದಾದ, ತೆರೆದ ಕಂಬದ ರಂಗ-ಮಂಟಪ, ಮುಚ್ಚಿದ ಮದ್ಯದ ಮಂಟಪ, ಮತ್ತು ಗರ್ಭಗೃಹ ಹೊಂದಿದೆ. ಈ ಯೋಜನೆಯು ಲಕ್ಕುಂಡಿಯ ಸ್ವಲ್ಪ ಹಿಂದಿನ ಬ್ರಹ್ಮ ಜಿನಾಲಯ ಜೈನ ದೇವಾಲಯ ಮತ್ತು ಕುಕ್ಕನೂರಿನ ಹಿಂದಿನ ಶಿವ ದೇವಾಲಯವನ್ನು ಹೋಲುತ್ತದೆ. ಆದರೆ ನನ್ನೇಶ್ವರ ದೇವಾಲಯವು ಈ ಹಳೆಯ ಆವೃತ್ತಿಗಳಿಗಿಂತ ಸ್ವಲ್ಪ ಭವ್ಯವಾದ ಮತ್ತು ವೈಶಿಷ್ಟ ಶೈಲಿಯೊಂದಿಗೆ ಹೊಸತನಗಳ ಸರಣಿಯನ್ನು ತೋರಿಸುತ್ತದೆ. ಇದಲ್ಲದೆ ನೆಲದ ಯೋಜನೆಯ ಸಾಪೇಕ್ಷ ಅನುಪಾತವು ವಾಸ್ತುಶಿಲ್ಪಿ ಕಲ್ಪನೆಗಳನ್ನು ಸುಂದರವಾಗಿಸುತ್ತದೆ ಮತ್ತು ಇದರ ಮಧ್ಯ ಮತ್ತು ಪಶ್ಚಿಮ ಭಾಗಗಳಿಂದ ನಿರ್ದಿಷ್ಟವಾಗಿ ನಾಗರ ಶೈಲಿಯನ್ನು ಸೂಚಿಸುತ್ತದೆ. ಆದರೂ ಶಿಲ್ಪಿಗಳು ನನ್ನೇಶ್ವರ ದೇವಸ್ಥಾನದಲ್ಲಿ ಸಾಬೂನು ಕಲ್ಲಿನಿಂದ ವಿವಿಧ ಸ್ತಂಭ ಶೈಲಿಗಳು ಮತ್ತು ಅಲಂಕಾರಿಕ ಅಂಶಗಳನ್ನುವಿಶಿಷ್ಟವಾಗಿ ಮತ್ತುಅದ್ಭುತವಾಗಿ ಕಾರ್ಯಗತಗೊಳಿದ್ದಾರೆ .
ಗುಢಮಂಡಪವು ರಂಗಮಂಟಪದಂತೆಯೇ ಚೌಕಾಕಾರದ ಯೋಜನೆಯಾಗಿದೆ. ಇದು ಪ್ರವೇಶಕ್ಕಾಗಿ ಮೆಟ್ಟಿಲುಗಳನ್ನು ಹೊಂದಿದೆ. ಸುಂದರವಾದ ಗಾತ್ರದ ಮತ್ತು ಕೆತ್ತಿದ ದ್ವಾರಪಾಲಕರುಗಳು, ಒಳಗ ಗುಢಮಂಡಪವು ನಾಲ್ಕು ಕಂಬಗಳನ್ನು ಹೊಂದಿದೆ. ರಂಗಮಂಟಪದಲ್ಲಿರುವ ಕಂಬಗಳಿಗಿಂತ ಹೆಚ್ಚು ವಿಸ್ತೃತವಾಗಿ ಕೆತ್ತಲಾಗಿದೆ ಮತ್ತು ಹೊಳಪು ನೀಡಲಾಗಿದೆ. ಗುಢಮಂಡಪ ಗೋಡೆಗಳು ವಿಮಾನದಲ್ಲಿ ಕಂಡುಬರುವ ಶೈಲಿಯನ್ನು ಹೋಲುತ್ತವೆ. ಗರ್ಭಗೃಹವು ಚೌಕಾಕಾರವಾಗಿದ್ದು ಶಿವಲಿಂಗವನ್ನು ಹೊಂದಿದೆ.
ಭೇಟಿ ನೀಡಿ