ಸೂಡಿ

  • ಅವಳಿ ಗೋಪುರ ದೇವಾಲಯ
  • ಪ್ರಾಚೀನ ನಾಗ ಕುಂಡ
  • ಮಲ್ಲಿಕಾರ್ಜುನ / ಅಚಲೇಶ್ವರ ದೇವಸ್ಥಾನ
  • 11 ಅಡಿ ಗಣೇಶ ವಿಗ್ರಹ
  • ನಂದಿ ಮಂಟಪ
  • ದೊಡ್ಡ ಶಿವಲಿಂಗದ ಪ್ರತಿಮೆ
  • ಕಾವಲು ಗೋಪುರ (ಹೂಡೆ ಗೋಪುರ)

ಸೂಡಿಯು ಕರ್ನಾಟಕ ರಾಜ್ಯದ ಗದಗ ಜಿಲ್ಲೆಯಲ್ಲಿರುವ ಒಂದು ಪಂಚಾಯತ್ ಪಟ್ಟಣವಾಗಿದೆ. ಸೂಡಿ ಆಧುನಿಕ ಕರ್ನಾಟಕದಲ್ಲಿ ಪಶ್ಚಿಮ ಚಾಲುಕ್ಯರ ವಾಸ್ತುಶಿಲ್ಪದ ಚಟುವಟಿಕೆಯ ಪ್ರಮುಖ ಪ್ರದೇಶಕ್ಕೆ ಸೇರಿದೆ. ಇಲ್ಲಿ ನಾಗೇಶ್ವರ ದೇವಸ್ಥಾನ (ಜೋಡು ಕಳಸದ ಗುಡಿ), ಈಶ್ವರ, ನಂದಿಮಂಟಪ, ಹನ್ನೊಂದು ಅಡಿ ಎತ್ತರದ ಬೃಹತ್ ಗಣಪತಿಯ ದೇವಾಲಯ ಮತ್ತು ಎಂಬತ್ತು ಅಡಿ ಸುತ್ತಳತೆಯ ಐವತ್ತು ಅಡಿ ಆಳದ ಬೃಹತ್ ನಾಗಕುoಡ ಬಾವಿ (ರಸ್ತ ಬಾವಿ) ಮತ್ತು ಕಾವಲು ಗೋಪುರ ಇದೆ.

ಸೂಡಿಯು ಬೆಂಗಳೂರಿನಿಂದ 417.4 ಕಿ.ಮೀ ಮತ್ತು ಗದಗ ನಗರದಿಂದ 47 ಕಿ.ಮೀ ದೂರದಲ್ಲಿದೆ. ಹಾಗೂ ಗಜೇಂದ್ರಗಡದಿಂದ 12 ಕಿ.ಮೀ ದೂರದಲ್ಲಿದೆ.

ಅವಳಿ ಗೋಪುರ ದೇವಾಲಯ

ಈ ದೇವಾಲಯವು ಪೂರ್ವ ಮತ್ತು ಪಶ್ಚಿಮಕ್ಕೆ ಮುಖ ಮಾಡಿರುವ ಎರಡು ಗೋಪುರಗಳನ್ನು ಹೊಂದಿದೆ. ಈ ದೇವಾಲಯವು ದ್ವಿಕೂಟಾಚಲ ಮಾದರಿಯಲ್ಲಿ ಒಂದೇ ನವರಂಗ, ಮುಖ ಮಂಟಪ ಮತ್ತು ಎರಡು ಗರ್ಭಗೃಹಗಳನ್ನು ಹೊಂದಿದೆ. ಪೂರ್ವಕ್ಕೆ ಮುಖ ಮಾಡಿರುವ ಗರ್ಭಗುಡಿಯಲ್ಲಿ ಶಿವನ ಅದ್ಭುತವಾದ ಕೆತ್ತಿದ ಉಬ್ಬು ಶಿಲ್ಪವಿದೆ. ಲಲಾಟ ಬಿಂದುವಿನಲ್ಲಿ ಸೂರ್ಯ ಉಭು ವಿಗ್ರಹವಿದ್ದು, ಇದು ಇಲ್ಲಿನ ಮತ್ತೊಂದು ವೈಶಿಷ್ಟ್ಯವಾಗಿದೆ. ಹನ್ನೆರಡು ಕಂಬಗಳನ್ನು ಹೊಂದಿರುವ ವೃತ್ತಾಕಾರದ ನವರಂಗದಲ್ಲಿ ಸುಂದರ ನಂದಿಯ ವಿಗ್ರಹವಿದೆ.

ಕಾವಲು ಗೋಪುರ (ಹೂಡೆ ಗೋಪುರ)

ಊರ ಮದ್ಯದಲ್ಲಿ ದೀರ್ಘ ವ್ಯಸವುಳ್ಳ, ಅತಿ ಎತ್ತರವಾದ ಒಂದು ಹುಡೆ ಇದ್ದು, ಇದನ್ನು ಕಾವಲು ಗೋಪುರವಾಗಿ ಬಳಸಿಕೊಳ್ಳುತ್ತಿದ್ದರು. 60 ಅಡಿ ಎತ್ತರದ ಮೇಲೆ ಕಾವಲು ಮಂಟಪ ಇದೆ. ಕಾವಲು ಮಂಟಪದ ಮೇಲೆ ಶಸ್ತ್ರ ಸರ್ಜಿತ ಪಡೆ ಇರುತಿತ್ತಂತೆ.

ಪ್ರಾಚೀನ ನಾಗ ಕುಂಡ

ಮಲ್ಲಿಕಾರ್ಜುನ / ಅಚಲೇಶ್ವರ ದೇವಸ್ಥಾನ

11 ಅಡಿ ಗಣೇಶ ವಿಗ್ರಹ

ನಂದಿ ಮಂಟಪ

ದೊಡ್ಡ ಶಿವಲಿಂಗ ಪ್ರತಿಮೆ

ಭೇಟಿ ನೀಡಿ
ರೋಣ ತಾಲೂಕು ಇತರೆ ಪ್ರವಾಸಿ ಸ್ಥಳಗಳು


Responsive Services Section

ಭೇಟಿ ನೀಡಿ
ಗದಗ ಜಿಲ್ಲೆ ಇತರೆ ತಾಲೂಕು ಪ್ರವಾಸಿ ಸ್ಥಳಗಳು


Responsive Services Section