ಚಿತ್ರಾನ್ನ

ಲೆಮನ್ ರೈಸ್ ಎಂದೂ ಕರೆಯಲ್ಪಡುವ ಚಿತ್ರಾನ್ನ ಜನಪ್ರಿಯ ಖಾದ್ಯವಾಗಿದೆ. ಇದು ಬೇಯಿಸಿದ ಅನ್ನ, ನಿಂಬೆ ರಸ, ಮಸಾಲೆಗಳು ಮತ್ತು ಕೆಲವೊಮ್ಮೆ ಬೀಜಗಳು ಅಥವಾ ತೆಂಗಿನಕಾಯಿಯಿಂದ ಮಾಡಿದ ಸುವಾಸನೆಯ ಮತ್ತು ಕಟುವಾದ ಅಕ್ಕಿ ಭಕ್ಷ್ಯವಾಗಿದೆ. ಇದನ್ನು ತಯಾರಿಸುವುದು ಸರಳವಾಗಿದೆ, ಆಗಾಗ್ಗೆ ತ್ವರಿತ ಊಟವಾಗಿ ಬಡಿಸಲಾಗುತ್ತದೆ ಅಥವಾ ದೇವಸ್ಥಾನಗಳಲ್ಲಿ ಪ್ರಸಾದವಾಗಿ (ಧಾರ್ಮಿಕ ಕೊಡುಗೆ) ನೀಡಲಾಗುತ್ತದೆ.

ಚಿತ್ರಾನ್ನ ಇದು ದಿಡೀರ್ ಅಂತ ಮಾಡುವ ಒಂದು ಅನ್ನದ ಬಗೆಯಾಗಿದ್ದು, ಊಟದ ಬಾಕ್ಸ್‌ಗೆ ಮತ್ತು ಬೆಳಗಿನ ಉಪಹಾರಕ್ಕೆ ಉತ್ತಮವಾಗಿದೆ. ಕೆಂಪು ಅಥವಾ ಹಸಿ ಮೆಣಸಿನ ಕಾಯಿ, ಈರುಳ್ಳಿ, ಕರಿಬೇವು,ಉದ್ದಿನಬೇಳೆ,
ಕಡಲೆಕಾಯಿ, ನಿಂಬೆ ಸರ, ಅರಿಶಿನ, ಸಾಸಿವೆ, ಜೀರಿಗೆ, ಶುಂಠಿ, ಅಕ್ಕಿ, ಬಳಸಿ ಮಾಡುವ ಚಿತ್ರಾನ್ನ ಆರೋಗ್ಯದಾಯಕವೂ ಹೌದು.

ಇದು ಕರ್ನಾಟಕ ಶೈಲಿಯ ನಿಂಬೆ ಅನ್ನವಾಗಿದೆ. ಮಸಾಲಾ ಪದಾರ್ಥಗಳೊಂದಿಗೆ ತಯಾರಿಸಿದ ಗೊಜ್ಜಿನೊಂದಿಗೆ ಅನ್ನವನ್ನು ಬೆರೆಸಿ ಇದನ್ನು ದಿಢೀರ್ ಎಂದು ತಯಾರಿಸಲಾಗುತ್ತದೆ. ಚಿತ್ರಾನ್ನವನ್ನು ಸವಿಯುವಾಗ ಮದ್ಯೆ ಮದ್ಯೆ ಸಿಗುವ ಕಡಲೆಕಾಯಿ, ಈರುಳ್ಳಿ ಇದರ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.