ಕೋಸಂಬರಿ

ಕೋಸಂಬರಿ ದಕ್ಷಿಣ ಭಾರತದ ಸಾಂಪ್ರದಾಯಿಕ ಸಲಾಡ್ ಆಗಿದೆ, ಕೋಸಂಬರಿ ಇದು ಒಂದು ಸಾಂಪ್ರದಾಯಕ ಪದಾರ್ಥವಾಗಿದೆ ಇದನ್ನು ಕಡಲೆ ಬೇಳೆ ಅಥವಾ ಹೆಸರುಬೇಳೆ ಉಪಯೋಗಿಸಿ ತಯಾರಿಸುತ್ತಾರೆ. ಬೇಳೆಗಳನ್ನು ಉಪಯೋಗಿಸಿ ತಯಾರಿಸುವ ಕೋಸಂಬರಿಯೂ ಆರೋಗ್ಯದಾಯಕರು ಆಗಿದೆ. ವಿಶಿಷ್ಟವಾಗಿ ಹಬ್ಬದ ಊಟ, ದೇವಾಲಯದ ಕೊಡುಗೆಗಳು ಅಥವಾ ವಿಶೇಷ ಸಂದರ್ಭಗಳ ಭಾಗವಾಗಿ ತಯಾರಿಸಲಾಗುತ್ತದೆ.

ತುರಿದ ಕ್ಯಾರೆಟ್, ನೀರಿನಲ್ಲಿ ನೆನೆ ಹಾಕಿ ಹೆಸರು ಬೇಳೆ, ತೆಂಗಿನ ತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ತಯಾರಿಸಿ ಅದಕ್ಕೆ ಎಣ್ಣೆ, ಸಾಸಿವೆ, ಇಂಗು, ಹಸಿಮೆಣಸಿನ ಕಾಯಿ ಹಾಕಿ ಒಗ್ಗರಣೆ ನೀಡಿ ತಯಾರಿಸುವ ಒಂದು ಸಲಾಡ್ ಇದಾಗಿದೆ. ಶುಭ ಸಮಾರಂಭಗಳಲ್ಲಿ ಕೋಸಂಬರಿ ಇಲ್ಲಿದೆ ಊಟವೇ ಅಪೂರ್ಣವಾಗಿ ಬಿಡುತ್ತದೆ. ಮಕ್ಕಳು ದೊಡ್ಡವರು ಎಲ್ಲರ ಬಾಯಲ್ಲಿ ಕೋಸಂಬರಿ ಒಂದು ಕ್ಷಣ ನೀರಿಳಿಸುತ್ತದೆ.