ಗೋಲಿಬಜ್ಜೆ ಅಥವಾ ಮಂಗಳೂರು ಬೋಂಡಾ ಇದು ದಕ್ಷಿಣ ಭಾರತದಾದ್ಯಂತ ಪ್ರಸಿದ್ಧ ಮತ್ತು ಟೇಸ್ಟಿ ಸಂಜೆಯ ತಿಂಡಿಯಾಗಿದೆ. ಮಳೆಗಾಲದ ಸಮಯದಲ್ಲಿ ಗೋಲಿಬಜ್ಜೆ ಜೊತೆಗೆ ಟೀ ಅಥವಾ ಚಟ್ನಿ ಇದ್ದರೆ ಅದರ ಮಜವೇ ಬೇರೆ. ಮಂಗಳೂರು ಬೋಂಡಾ ತಯಾರಿಸಲು ಮುಖ್ಯವಾಗಿ ಮೈದಾ ಹಿಟ್ಟು, ಮೊಸರು, ಜೀರಿಗೆ, ಸಕ್ಕರೆ, ರುಬ್ಬಿ ಕೊಂಡ ಉದ್ದಿನ ಹಿಟ್ಟು ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ಮೊದಲು ಹಸಿಮೆಣಸನ್ನು ಹೆಚ್ಚಿ ಕೊಳ್ಳಬೇಕು ಅದಕ್ಕೆ ಬೇವು, ರುಬ್ಬಿದ ಶುಂಠಿ ಮತ್ತು ಕಾಯಿತುರಿಯನ್ನು ಸಮ ಪ್ರಮಾಣದಲ್ಲಿ ಮಿಶ್ರಣ ಮಾಡಬೇಕು. ನಂತರ ಉದ್ದಿನ ಹಿಟ್ಟನ್ನು ಸೇರಿಸಬೇಕು ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ಜೀರಿಗೆಯನ್ನು ತೋರಿಸಿ ಚೆನ್ನಾಗಿ ಬೆರೆಸಿಕೊಳ್ಳಬೇಕು. ಅದಕ್ಕೆ ಕಡ್ಲೆ ಹಿಟ್ಟನ್ನು ಮತ್ತು ಮೈದಾ ಹಿಟ್ಟನ್ನು ಸೇರಿಸಿಕೊಂಡು ಬೆರೆಸಿಕೊಳ್ಳಬೇಕು ನಂತರ ಬಿಸಿ ಎಣ್ಣೆಯಲ್ಲಿ ಬೆರೆಸಿ ಕೊಂಡ ಹಿಟ್ಟನ್ನು ಉಂಡೆಗಳ ಆಕಾರದಲ್ಲಿ ಬಿಡಬೇಕು.