ಮಸಾಲೆ ದೋಸೆ

ಮಸಾಲೆ ದೋಸೆ ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರು ಬರುತ್ತದೆ. ತೆಳುವಾದ ಮತ್ತು ಗರಿಗರಿಯಾದ ದೋಸೆಯ ಮೇಲೆ ಎಣ್ಣೆ ಹಾಗೂ ಕೆಂಪು ಚಟ್ನಿಯನ್ನು ಸವರಿ, ಅದರ ಮಧ್ಯಕ್ಕೆ ಆಲೂಗಡ್ಡೆ ಪಲ್ಯವನ್ನು ಸೇರಿಸಿ ಸ್ಟೈಲಿಶ್ ಆಗಿ ಸರ್ವ್ ಮಾಡುವ ಈ ಪದಾರ್ಥವು ನೋಡುವುದಕ್ಕೂ ತಿನ್ನುವುದಕ್ಕೂ ಹೆಚ್ಚು ಅದ್ಭುತವಾಗಿರುತ್ತದೆ.

ಆಲೂಗಡ್ಡೆ, ಈರುಳ್ಳಿ, ಹಸಿರು ಬಟಾಣಿ, ಹಸಿ ಮೆಣಸಿನಕಾಯಿಗಳು, ಸಾಸಿವೆ, ಉದ್ದಿನ ಬೇಳೆ, ಎಣ್ಣೆ, ಅರಿಶಿನ, ಕರಿಬೇವು, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕ ಉಪ್ಪು ಸೇರಿಸಿ ತಯಾರಿಸುವ ಈ ಆಲೂಗಡ್ಡೆ ಪಲ್ಯವು ಮಸಾಲೆ ದೋಸೆಗೆ ಉತ್ತಮ ರುಚಿಯನ್ನು ನೀಡುತ್ತದೆ.
ಖಾರ ಇಷ್ಟಪಡುವವರಿಗೆ ಬೆಳ್ಳುಳ್ಳಿ, ಕೆಂಪು ಮೆಣಸಿನಕಾಯಿ, ನಿಂಬೆ ರಸ, ತೆಂಗಿನ ತುರಿ, ಎಣ್ಣೆ ಮತ್ತು ಉಪ್ಪು ಸೇರಿಸಿ ತಯಾರಿಸುವ ಕೆಂಪು ಚಟ್ನಿಯೂ ಒಳ್ಳೆಯ ರುಚಿಯನ್ನು ನೀಡುತ್ತದೆ.

ಎಲ್ಲಾ ರೀತಿಯ ರುಚಿಗಳನ್ನು ಒಟ್ಟುಗೂಡಿಸುವ ಈ ಮಸಾಲೆಯುಕ್ತ ದೋಸೆ ಎಲ್ಲರಿಗೂ ಪ್ರಿಯವಾದದ್ದು.

Read Also
ಕರ್ನಾಟಕದ ಇತರೆ ತಿನಿಸುಗಳು


Responsive Services Section

Read Also


Responsive Services Section