ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ ಇದು ಕರ್ನಾಟಕ ಪ್ರಸಿದ್ದ ಬೆಳಗಿನ ತಿಂಡಿಯಾಗಿದೆ. ಅಕ್ಕಿ ಹಿಟ್ಟು ಬಳಸಿ ತಯಾರಿಸುವ ಈ ಅಕ್ಕಿ ರೊಟ್ಟಿಯು ರುಚಿಯಾದ ಬೆಳಗಿನ ತಿಂಡಿಯಾಗಿದೆ. ಅಕ್ಕಿ ಹಿಟ್ಟನ್ನು ಬೇಯಿಸಿ ವೃತ್ತಕಾರವಾಗಿ ತಟ್ಟಿ ತವದ ಮೇಲೆ ಚನ್ನಾಗಿ ಬೇಯಿಸಿ ತಯಾರಿಸಲಾಗುತ್ತದೆ. ಚಟ್ನಿ, ಸಾಂಬಾರ್, ಪಲ್ಯ ಇವೆಲ್ಲದರ ಬೆಸ್ಟ್ ಕಂಬಿನೇಸನ್ ಇದಾಗಿದೆ.

ಅಕ್ಕಿ ರೊಟ್ಟಿ ಹಾಗು ಬಾಳೆಹಣ್ಣು ನನ್ನ ಪ್ರಿಯವಾದ ಕಂಬಿನೇಸನ್ ಆಗಿದೆ. ಎಲ್ಲರೂ ಇಷ್ಟ ಪಟ್ಟು ತಿನ್ನುವ ರೊಟ್ಟಿಯು ಆರೋಗ್ಯಕರವು ಹಾಗೂ ಸುಲಭವಾಗಿ ತಯಾರಿಸುವ ಪದಾರ್ಥ ವಾಗಿದೆ. ವಾರದಲ್ಲಿ ಒಮ್ಮೆಯಾದರೂ ಮನೆಯಲ್ಲಿ ರೊಟ್ಟಿ ಮಾಡುವುದು ಅಬ್ಯಾಸವಾಗಿ ಬಿಟ್ಟಿದೆ. ಇದರಲ್ಲಿ ಎರಡು ವಿಧಗಳಿವೆ ಒಂದು ಅಕ್ಕಿ ಹಿಟ್ಟನ್ನು ಸೊಲ್ಪ ಸಮಯದ ವರೆಗು ಕುದಿಯುವ ನೀರಿನಲ್ಲಿ ಬೇಯಿಸಿ ತಯಾರಿಸಿ ರೊಟ್ಟಿಯನ್ನು ತಟ್ಟಿ ತವದ ಮೇಲೆ ಬೇಯಿಸಲಾಗುತ್ತದೆ. ಹಾಗೂ ಇನ್ನೊಂದು ಅಕ್ಕಿ ಹಿಟ್ಟನ್ನು ಇತರ ಪದಾರ್ಥಗಳೊಂದಿಗೆ ಬೆರೆಸಿ ಹಿಟ್ಟನ್ನು ತಯಾರಿಸಿ ರೊಟ್ಟಿಯನ್ನು ತಟ್ಟಿ ತವದಲ್ಲಿ ಬೇಯಿಸಲಾಗುತ್ತದೆ.

ಖಾಲಿ ಅಕ್ಕಿ ರೊಟ್ಟಿ ತಿನ್ನುವುದು ಅಷ್ಟು ರುಚಿಕರ ಎಂದು ಅನಿಸದಿದ್ದರೆ ಅಕ್ಕಿ ಹಿಟ್ಟಿಗೆ ಜೀರಿಗೆ, ಕರಿಬೇವು, ಶುಂಠಿ, ಈರುಳ್ಳಿ, ಕ್ಯಾರೆಟ್, ತೆಂಗಿನಕಾಯಿ, ಸೊಪ್ಪು, ಸೌತೆಕಾಯಿ ಇತರೆ ಪದಾರ್ಥ ಗಳನ್ನು ಸೇರಿಸಿ ತಯಾರಿಸಬಹುದು.