ಇದು ದಕ್ಷಿಣ ಭಾರತದ ಪ್ರಸಿದ್ದ ಬೆಳಗಿನ ಉಪಹಾರವಾಗಿದೆ. ಅತಿ ಸುಲಭವಾಗಿ, ರುಚಿಕರವಾಗಿ ಹಾಗೂ ಆರೋಗ್ಯಕರವಾಗಿ ತಯಾರಿಸುವ ಪದಾರ್ಥ ಇದಾಗಿದೆ.
ಅವಲಕ್ಕಿ, ಉಪ್ಪು, ನಿಂಬೆ ರಸ, ಎಣ್ಣೆ, ಸಾಸಿವೆ, ಕಡಲೆ, ಉದ್ದಿನ ಬೇಳೆ, ಹಸಿ ಮೆಣಸಿನಕಾಯಿ, ಕರಿಬೇವು, ಈರುಳ್ಳಿ, ಅರಿಸಿನ ಬಳಸಿ ಅವಲಕ್ಕಿ ಯನ್ನು ತಯಾರಿಸಲಾಗುತ್ತದೆ. ಮೊಸರು ಇದರ ಅತ್ಯುತ್ತಮ ಸಂಯೋಜನೆಯಾಗಿದೆ. ದೇವರ ಕಾರ್ಯಗಳಲ್ಲಿ ಹಾಗೂ ಇತರೆ ಸಮಾರಂಭಗಳಲ್ಲಿ ಇದನ್ನು ಬೆಳಗಿನ ಉಪಹಾರವಾಗಿ ನೀಡುವುದು ರೂಡಿಯಾಗಿದೆ.