ಇಡ್ಲಿ ಕರ್ನಾಟಕದ ಪ್ರಸಿದ್ಧ ಬೆಳಗಿನ ತಿಂಡಿ. ಅಕ್ಕಿ ಹಿಟ್ಟು ಬಳಸಿ ಮಾಡಿದ ಈ ಇಡ್ಲಿ ರುಚಿಕರವಾದ ಉಪಹಾರವಾಗಿದೆ. ಇಡ್ಲಿಯನ್ನು ಅಕ್ಕಿಯನ್ನು ರುಬ್ಬಿ ಅದನ್ನು ನೀರಿರುವಂತೆ ಮಾಡಿ ನಂತರ ಬಿಸಿ ಗಾಳಿಯಲ್ಲಿ ಬೇಯಿಸಿ (ಸ್ಟೀಮ್) ತಯಾರಿಸಲಾಗುತ್ತದೆ.
ಇದರ ಬೆಸ್ಟ್ ಕಾಂಬಿನೇಶನ್ ವಡೆ ಮತ್ತು ಚಟ್ನಿ. ಎಲ್ಲರೂ ಇಷ್ಟಪಟ್ಟು ತಿನ್ನುವ ಇಡ್ಲಿ, ವಡೆ, ಚಟ್ನಿ ಆರೋಗ್ಯಕರ. ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಇಡ್ಲಿ ಮಾಡುವುದು ಅಭ್ಯಾಸವಾಗಿಬಿಟ್ಟಿದೆ. ಆರೋಗ್ಯ ಸರಿಯಿಲ್ಲದ ರೋಗಿಗಳಿಗೆ ಇಡ್ಲಿ ಉತ್ತಮ ಉಪಹಾರವಾಗಿದೆ.