ನೀರು ದೋಸೆ

ನೀರು ದೋಸೆ ಇದು ಕರ್ನಾಟಕದ ಮಂಗಳೂರಿನ ಪ್ರಸಿದ್ದ ಬೆಳಗಿನ ಉಪಹಾರವಾಗಿದೆ. ನೀರ್ ದೋಸೆಯು ಕುಂದಾಪುರ ಹಾಗೂ ಮಲೆನಾಡು ಬಾಗಗಳಲ್ಲಿ ಅತ್ಯಂತ ಜನಪ್ರಿಯವಾಗಿದೆ. ತೆಳ್ಳನೆಯ ದೋಸೆ ಎಂದು ಕರೆಯಲ್ಪಡುವ ಈ ನೀರ್ ದೋಸೆಯನ್ನು ನೀರಿನಲ್ಲಿ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿಕೊಂಡು ಅದಕ್ಕೆ ನೀರು ಸೇರಿಸಿ ತೆಳ್ಳಗೆ ಮಾಡಿಕೊಂಡು ದೋಸೆ ತವದ ಮೇಲೆ ತಳಿದು ಬೇಯಿಸಿ ಅದನ್ನು ಎರಡು ಭಾರಿ ಮಾಡಚಿ ತ್ರಿಕೋನ ಆಕಾರದಲ್ಲಿ ಸೇವಿಸಲು ನೀಡಲಾಗುತ್ತದೆ.

ಅಕ್ಕಿ, ಉಪ್ಪು, ನೀರು ಕೇವಲ ಮೂರೇ ಪದಾರ್ಥವನ್ನು ಬಳಸಿ ತಯಾರಿಸುವ ನೀರ್ ದೋಸೆಯು ಅತ್ಯಂತ ಮೃದು ಹಾಗೂ ರುಚಿಯಾಗಿರುತ್ತದೆ. ಕೆಲವರು ಇದಕ್ಕೆ ತೆಂಗಿನ ತುರಿ ಸಹ ಸೇರಿಸಿ ರುಚಿ ಹೆಚ್ಚಿಸುತ್ತಾರೆ. ನೀರ್ ದೋಸೆಯು ಮಸಾಲೆಯುಕ್ತ ತೆಂಗಿನಕಾಯಿ ಚಟ್ನಿಯ ಜೊತೆ ಅದ್ಬುತವಾಗಿರುತ್ತದೆ.