ವಾಣಿವಿಲಾಸ ಸಾಗರ ಜಲಾಶಯ (ಮಾರಿಕಣಿವೆ ಜಲಾಶಯ)ವು ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ಇರುವ ಪ್ರಮುಖ ಜಲಾಶಯ ಮತ್ತು ಅಣೆಕಟ್ಟಾಗಿದೆ. ಈ ಅಣೆಕಟ್ಟನ್ನು ವೇದಾವತಿ ನದಿಗೆ ಅಡ್ಡಲಾಗಿ, ಮೈಸೂರು ಮಹಾರಾಜರ ಆಡಳಿತಕಾಲದಲ್ಲಿ, ಸ್ವಾತಂತ್ರ್ಯ ಪೂರ್ವದಲ್ಲಿ ನಿರ್ಮಿಸಲಾಯಿತು. ವಿಶೇಷವೆಂದರೆ, ಈ ಅಣೆಕಟ್ಟಿನ ನಿರ್ಮಾಣಕ್ಕೆ ಸಿಮೆಂಟ್ ಬಳಸದೇ, ಕೇವಲ ಗಾರೆ ಉಪಯೋಗಿಸಿ ನಿರ್ಮಿಸಲಾಯಿತು. ಆ ಕಾಲದ ಶಿಲ್ಪಕಲೆಯ ಶ್ರೇಷ್ಠ ಉದಾಹರಣೆಯಾಗಿ ಇದು ಇಂದಿಗೂ ಉಳಿದು ನಿಂತಿದೆ.
ಈ ಜಲಾಶಯವನ್ನು ಮಾರಿಕಣಿವೆ ಜಲಾಶಯ ಎಂದೂ ಕರೆಯಲಾಗುತ್ತದೆ. ಇದು ಸುತ್ತಮುತ್ತಲಿನ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಒದಗಿಸುವುದರ ಜೊತೆಗೆ, ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿಯೂ ಪ್ರಸಿದ್ಧವಾಗಿದೆ.
ಈ ಜಲಾಶಯವು 187 ಕಿ.ಮೀ ದೂರದಲ್ಲಿದೆ ಮತ್ತು ಚಿತ್ರದುರ್ಗದಿಂದ 58 ಕಿ.ಮೀ ದೂರದಲ್ಲಿದೆ. ಹಾಗೂ ಹಿರಿಯೂರು ಪಟ್ಟಣದಿಂದ 21 ಕಿ.ಮೀ ಮತ್ತು ಚಿತ್ರದುರ್ಗ ನಗರ ರೈಲ್ವೆ ನಿಲ್ದಾಣದಿಂದ ಕೇವಲ 60 ಕಿ.ಮೀ ದೂರದಲ್ಲಿದೆ.
ಈ ಅಣೆಕಟ್ಟಿನ ಜಲಾಶಯವು ಹಿರಿಯೂರು ಹಾಗೂ ಚಿತ್ರದುರ್ಗ ನಗರಗಳಿಗೆ ಮುಖ್ಯ ಸ್ಥಳೀಯ ನೀರಿನ ಮೂಲವಾಗಿದೆ. ಇದು ಎಡ ದಂಡೆ ಕಾಲುವೆ ಮತ್ತು ಬಲ ದಂಡೆ ಕಾಲುವೆಗಳ ಮೂಲಕ ಚಳ್ಳಕೆರೆ ತಾಲೂಕಿನ ಪ್ರದೇಶಗಳಿಗೆ ನೀರಾವರಿ ಒದಗಿಸುತ್ತದೆ. ಈ ವ್ಯವಸ್ಥೆಯಿಂದಾಗಿ ಸುಮಾರು 100 ಕ್ಕಿಂತಲೂ ಹೆಚ್ಚು ಚದರ ಕಿಲೋಮೀಟರ್ ಪ್ರದೇಶ ಕೃಷಿ ನೀರಾವರಿಯಿಂದ ಲಾಭ ಪಡೆಯುತ್ತದೆ.
ಭೇಟಿ ನೀಡಿ